ಬೆಳಗಾವಿಯಲ್ಲಿ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮ ಕಚೇರಿ ಸ್ಥಾಪಿಸಲು ಈರಣ್ಣಾ ಕಡಾಡಿ ಮನವಿ
ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಬೆಳಗಾವಿ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯಸಭೆಯಲ್ಲಿ ಸಂಸದರಾದ ಈರಣ್ಣ ಕಡಾಡಿ ಒತ್ತಾಯಿಸಿದರು.
ಗುರುವಾರ (ಮಾ 18) ರಂದು ನವದೆಹಲಿ ಸಂಸತ್ತ ಅಧಿವೇಶನದ ಕಾರ್ಯ ಕಲಾಪದ ಶೂನ್ಯ ಅವಧಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಬೆಳಗಾವಿ ಕರ್ನಾಟಕದ ವಾಯುವ್ಯ ಭಾಗದಲ್ಲಿ ಕೈಗಾರಿಕಾ ಪ್ರದೇಶವಾಗಿದ್ದು, ಸಕ್ಕರೆ ಕಾರ್ಖಾನೆಗಳ ನೆಲಬಿಡಾಗಿದೆ. ಪ್ರಮುಖವಾಗಿ ಕಬ್ಬು, ಹತ್ತಿ, ತಂಬಾಕು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ 36 ದೊಡ್ಡ ಕೈಗಾರಿಕೆಗಳಿವೆ, ಅವುಗಳಲ್ಲಿ ಪ್ರಮುಖ ಉತ್ಪಾದನಾ ಚೀನಿ, ಫೌಂಡ್ರಿ, ಕಬ್ಬಿಣ, ಅಲ್ಯೂಮಿನಿಯಂ ಮತ್ತು ಪಾಲಿಹೈಡ್ರಾನ್ ಕಾರ್ಖಾನೆಗಳಿವೆ. ಕರ್ನಾಟಕದ ಪ್ರಮುಖ ಚೀನಿ ಉತ್ಪಾದನಾ ಕಾರ್ಖಾನೆಗಳು ಬೆಳಗಾವಿಯಲ್ಲಿವೆ ಎಂದರು.
ಎಕ್ಸ್ ಎಸ್.ಸಿ.ಜೆಢ್ ಏರೋಸ್ಪೇಸ್ ತಯಾರಿಕೆ ಘಟಕ ಹೀಗೆ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಉಪಸ್ಥಿತಿಯಿಂದಾಗಿ, ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದಾರೆ. ಇ.ಎಸ್.ಐ.ಸಿ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಉತ್ತಮವಾದ ಆಸ್ಪತ್ರೆ ಇಲ್ಲದಿರುವ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ ಮತ್ತು ಇ.ಎಸ್.ಐ.ಸಿ ಆಸ್ಪತ್ರೆ ಇಲ್ಲದ ಕಾರಣ ಮತ್ತು ತುರ್ತು ವೈದ್ಯಕೀಯ ನೆರವು ಸಾಧ್ಯವಿಲ್ಲ ಆದ್ದುರಿಂದ ಕರ್ಮಚಾರಿಗಳ ಹಿತದೃಷ್ಠಿಯಿಂದ ಕೈಗಾರಿಕೆಗಳ ನಾಡು ಬೆಳಗಾವಿಯ ಉದ್ಯಮಭಾಗದಲ್ಲಿ ಒಂದು ಸುಸಜ್ರ್ಜಿತವಾದ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವ ಅವಶ್ಯಕತೆ ಇದೆ ಇದರಿಂದ ಲಕ್ಷಾಂತರ ಕಾರ್ಮಿಕರ ಪರಿವಾರದವರಿಗೆ ಆರೋಗ್ಯದ ರಕ್ಷಣೆಯನ್ನು ನೀಡಿದಂತಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ತದನಂತರ ಕೇಂದ್ರ ಕಾರ್ಮಿಕ ಮತ್ತು ಉದೋಗ್ಯ ಸಚಿವಾಲಯದ ರಾಜ್ಯ ಸಚಿವರಾದ ಸಂತೋಷಕುಮಾರ ಗಂಗ್ವಾರ್ ಅವರ ಕಛೇರಿಗೆ ಭೇಟಿ ನೀಡಿ, ಬೆಳಗಾವಿ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಇ.ಎಸ್.ಐ.ಸಿ (ಇSIಅ) ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ