Latest

ಕಾಗವಾಡ ಯುವಕನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬೈಕ್ ಸವಾರನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕಾತ್ರಾಳ ರಸ್ತೆಯಲ್ಲಿ ನಡೆದಿದೆ.

26 ವರ್ಷದ ಚಿಂತಾಮಣಿ ಕೊಲೆಯಾದ ದುರ್ದೈವಿ. ಐನಾಪೂರದಿಂದ ಕಾತ್ರಾಳ ಕಡೆಗೆ ತೆರಳುವಾಗ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.

ಮೃತ ಚಿಂತಾಮಣಿ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಎರಡು ತಿಂಗಳ ಹಿಂದಷ್ಟೇ ಐನಾಪೂರ ಗ್ರಾಮದಲ್ಲಿ ಮೆಡಿಕಲ್ ಶಾಪ್ ತೆಗೆದಿದ್ದ. ಕೆಲಸ ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಆತನನ್ನು ಹತ್ಯೆ ಮಾಡಿದ್ದಾರೆ.
ಬಿಜೆಪಿ ನಾಯಕರ ಜತೆ ಅಮಿತ್ ಶಾ ಸಭೆಯಲ್ಲಿ ಬದಲಾವಣೆ

Related Articles

Back to top button