Belagavi NewsBelgaum NewsCrimeKannada NewsKarnataka NewsNational

*ಲವರ್ ಜೊತೆ ಸೇರಿ ಪತಿ ಮನೆಯಲ್ಲಿ ಕಳ್ಳತನ ಮಾಡಿದ ಪತ್ನಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಿಯಕರನೊಂದಿಗೆ ಓಡಿ ಹೋಗಲು ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಪತಿಯ ಮನೆಗೆ ಕನ್ನ ಹಾಕಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಹಣಮಂತ ಮಾರಾಪೂರ, ಹಸೀನಾ ನದಾಫ್ ಬಂಧಿತ ಪ್ರೇಮಿಗಳು. ಆರೋಪಿ ಮಹಿಳೆ ತನ್ನ ಪ್ರೀಯಕರನ ಜೊತೆಗೆ ಸೇರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.‌ 

ಹಸೀನಾ ಪತಿಯ ಮನೆಯಲ್ಲಿದ್ದ 21 ಲಕ್ಷ ಮೌಲ್ಯದ ‌154.6 ಗ್ರಾಂ ಚಿನ್ನಾಭರಣ. 11 ಸಾವಿರ ಮೌಲ್ಯದ 45ಗ್ರಾಂ ಬೆಳ್ಳಿಯ ಆಭರಣ ಕಳ್ಳತನ ಮಾಡಿದ್ಲು.‌ ಕೂಡಲೆ ಕಳ್ಳತನದ ಬಗ್ಗೆ ದಿಲಶಾದ್ ನದಾಫ್ ಎಂಬುವವರಿಂದ ಕಟಕೋಳ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೇವಲ 48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ.

ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಜೊತೆ ವಿವಾಹವಾಗಿದ್ದಳು. ಆದರೆ ಮದುವೆಯಾದ ಬಳಿಕವೂ ತನ್ನ ಪ್ರಿಯಕರ ಹಣಮಂತನ ಸಂಪರ್ಕದಲ್ಲಿದ್ದಳು. ಬಳಿಕ ಇಬ್ಬರೂ ಸೇರಿ ಶರೀಫ್ ಮನೆಯಲ್ಲಿ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

Home add -Advt

Related Articles

Back to top button