Belagavi NewsBelgaum NewsKarnataka News

*ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ*

ಸಾಲಗಾರರ ಕಿರುಕುಳ

Home add -Advt


ಪ್ರಗತಿವಾಹಿನಿ ಸುದ್ದಿ: ಫೈನಾನ್ಸ್ ನವರ ಕಿರುಕುಳಕ್ಕೆ ನೊಂದು ಸಾವಿಗೆ ಶರಣಾಗುತ್ತಿರ್ವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಸಾಲಕೊಟ್ಟವರ ಕಾಟಕ್ಕೆ ನೊಂದ ವ್ಯಕ್ತಿಯೊಬ್ಬರು ತಮ್ಮದೇ ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗದಲ್ಲಿ ನಡೆದಿದೆ.

ಇಲ್ಲಿನ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ. ರಫಿಕ್ ಬಾಬುಸಾಬ್ (38) ಆತ್ಮಹತ್ಯೆ ಮಾಡಿಕೊಂಡವರು. ರಫಿಕ್ ಸಾಲ ಮಾಡಿ ಬೊಲೆರೋ ವಾಹನ ಖರೀದಿಸಿದ್ದರು. ವಾರದ ರೀತಿಯಲ್ಲಿ ಬಡ್ಡಿ ತೀರಿಸುವುದಾಗಿ ಹೇಳಿದ್ದರು. ಸಾಲಗಾರರ ಕಿರುಕುಳ ಹೆಚ್ಚುತ್ತಿದ್ದಂತೆ ತಾವು ಖರೀದಿಸಿದ್ದ ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Articles

Back to top button