Latest

ಬೆಳಗಾವಿಯಲ್ಲಿ ಮತ್ತೆ MES ಕ್ಯಾತೆ; ಕರಾಳದಿನ ಆಚರಿಸಿ ನಾಡದ್ರೋಹಿ ಘೋಷಣೆ ಕೂಗಿದ ಪುಂಡರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಒಂದೆಡೆ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದರೆ ಇತ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದು, ಕರಾಳದಿನಾಚರಣೆ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಮತ್ತೊಂದೆಡೆ ಹುಕ್ಕೇರಿ ಮಠದಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಭರ್ಜರಿ ಹೋಳಿಗೆ ಊಟ ಬಡಿಸಲಾಗುತ್ತಿದೆ.

ಎಲ್ಲೆಲ್ಲೂ ಕನ್ನಡ ಕಲರವ ಮನೆ ಮಾಡಿದೆ. ಇದನ್ನು ಸಹಿಸದ ಎಂಇಎಸ್ ಬೆಳಗಾವಿಯ ಸಂಭಾಜಿ ಮೈದಾನದಿಂದ ಕರಾಳ ದಿನಾಚರಣೆ ಮೆರವಣಿಗೆಗೆ ಚಾಲನೆ ನೀಡಿದೆ.

ಎಂ ಇಎಸ್ ಕಾರ್ಯಕರ್ತರು ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ ಸೇರಿದಂತೆ ಗಡಿ ತಾಲೂಕುಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿ ನಡದ್ರೋಹಿ ಘೋಷಣೆಗಳನ್ನು ಕೂಗಿ ಉದ್ಧಟತನ ಮೆರೆದಿದ್ದಾರೆ ಘೋಷಣೆ ಕೂಗಿದ್ದಾರೆ. ಕಪ್ಪುಪಟ್ಟಿ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಎಂಇಎಸ್ ಕಾರ್ಯಕರ್ತರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.

Home add -Advt

ಕರ್ನಾಟಕದಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯಬೇಕು; ಸಿಎಂ ಬೊಮ್ಮಾಯಿ

https://pragati.taskdun.com/latest/67th-karnataka-rajyotsavacm-basavaraj-bommaiflag-hosting/

Related Articles

Back to top button