Kannada NewsLatest

ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2021 ನೇ ವರ್ಷದಲ್ಲಿ ಪ್ರಥಮ ಮುದ್ರಣವಾದ ಪುಸ್ತಕಗಳನ್ನು ರಾಜ್ಯ ಮಟ್ಟದ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ಸಾಹಿತ್ಯ, ಪರಾಮರ್ಶನ, ಸ್ಪರ್ಧಾತ್ಮಕ ಪಠ್ಯ ಪುಸ್ತಕ, ವಿಶ್ವಕೋಶಗಳು- ವಿಜ್ಞಾನ ತಂತ್ರಜ್ಞಾನ, ಕಾನೂನು, ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ ಕೃತಿಗಳು ಸೇರಿದಂತೆ ಇತರೆ ಪುಸ್ತಕಗಳ ಆಯ್ಕೆಗಾಗಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜುಲೈ 31 ರ ಒಳಗಾಗಿ ಬೆಂಗಳೂರಿನ ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಪಾರ್ಕ್ ಉದ್ಯಾನವನ ಈ ವಿಳಾಸಕ್ಕೆ ಸಲ್ಲಿಸಿ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಸದರಿ ವಿಳಾಸದಲ್ಲಿ ಜು. 30 ರ ಒಳಗಾಗಿ ಕಾಪಿರೈಟ್ ಮಾಡಿಸಬೇಕು.

ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಹಾಗೂ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಓದುಗರಿಗೆ ಅನುಕೂಲವಾಗುವಂತೆ ಲೇಖಕರು, ಲೇಖಕ ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ಅನುಮತಿ ಪತ್ರದೊಂದಿಗೆ ಸದರಿ ಪುಸ್ತಕದ ಸಾಫ್ಟ್ ಕಾಫಿ ಸಿ.ಡಿ ರೂಪದಲ್ಲಿ ಸಲ್ಲಿಸಬೇಕು ಎಂದು ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗದಿತ ಅರ್ಜಿ ನಮೂನೆಯನ್ನು ಇಲಾಖೆಯ ಅಂತರ್ಜಾಲ www.dpl.Karnataka.gov.in ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಂತರ್ಜಾಲ ಅಥವಾ ಬೆಂಗಳೂರಿನ ಡಾ. ಅಂಬೆಡ್ಕರ ವೀಧಿ ವಿಶ್ವೇಶ್ವರಯ್ಯ ಮುಖ್ಯ ಗೋಪುರ 4 ನೇ ಮಹಡಿಯಲ್ಲಿರುವ ನಿರ್ದೇಶಕರ ಕಚೇರಿ, ಸಾರ್ವಜನಿಕ ಗ್ರಂಥಾಲಯ ಅಥವಾ ದೂ.080-2286990, 22867358 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಅಂಚೆ ಕಚೇರಿಯಲ್ಲಿ ಪಿಎಲ್ಐ ಏಜೆಂಟ್ ಹುದ್ದೆಗಳಿಗೆ ನೇಮಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button