Latest

ಬ್ಲಾಸ್ಟಿಂಗ್ ತಜ್ಞರಿಲ್ಲದೇ ನಿಯಂತ್ರಿತ ಸ್ಪೋಟಕ ಬಳಸಬಾರದು: ಎಸ್.ಪಿ. ಲಕ್ಷ್ಮಣ ನಿಂಬರಗಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಣಿಗಾರಿಕೆ ಸ್ಥಳಗಳಲ್ಲಿ ಬ್ಲಾಸ್ಟಿಂಗ್ ತಜ್ಞರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಮ್ಯಾಗಜಿನ್ ಸ್ಪೋಟಿಸಿಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಗಣಿಗಾರಿಕೆಯಲ್ಲಿ ನಡೆದ ಅವಘಡದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಕಾರ್ಯಾಲಯ ಬೆಳಗಾವಿಯಲ್ಲಿ ಮುಂಜಾಗೃತ ಕ್ರಮವಾಗಿ ನಡೆದ ಗಣಿ ಮತ್ತು ಕ್ವಾರಿ ಮಾಲೀಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಲೈಸನ್ಸ್ ಹಾಗೂ ಬ್ಲಾಸ್ಟಿಂಗ್ ತಜ್ಞರಿಲ್ಲದೇ ನಿಯಂತ್ರಿತ ಸ್ಪೋಟಕಗಳನ್ನು ಬಳಸಬಾರದು. ಒಂದು ವೇಳೆ ಬಳಸಿದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬ್ಲಾಸ್ಟಿಂಗ್ ಮಾಡುವ ಮುಂಚೆ ಅದರ ಕುರಿತಂತೆ ಮಾಹಿತಿ ಇರುವ ತಜ್ಞರಿಂದ ಬ್ಲಾಸ್ಟಿಂಗ್ ಮಾಡಬೇಕು ಯಾವುದೇ ಮಾಹಿತಿ ಇಲ್ಲದವರಿಂದ ಬ್ಲಾಸ್ಟಿಂಗ್ ಮಾಡಬಾರದು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾಟ್ಸಾಪ್ ಗುಂಪುಗಳನ್ನು ರಚಿಸಲು ಸಲಹೆ:
ಆಯಾ ತಾಲೂಕುಗಳಿಗೆ ಅನುಗುಣವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಎಲ್ಲಾ ಕ್ವಾರಿ ಮಾಲೀಕರು ವಾಟ್ಸಪ್ ಗ್ರುಪ್ ಗಳನ್ನು ರಚಿಸಲು ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ ನೀಡಿದರು.

ಪ್ರತಿ ಸಿಡಿಮದ್ದುಗಳ ಸ್ಪೋಟಕಗಳ ಕುರಿತಂತೆ ಮಾಹಿತಿಯನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಮಾಹಿತಿ ನೀಡಬೇಕು ಯಾವುದೇ ಮ್ಯಾಗಜಿನ್ ಗಳನ್ನ ಆಮದು ಅಥವಾ ರಫ್ತು ಮಾಡುವಾಗ ಅದರ ಮಾಹಿತಿಯನ್ನು ಗ್ರೂಪ್ ಗಳಲ್ಲಿ ಹಾಕಬೇಕೆಂದು ಸಲಹೆ ನೀಡಿದರು ಇದರಿಂದ ಕಾನೂನುಬಾಹಿರ ಮ್ಯಾಗಜಿನ್ ಗಳ ಆಮದು ರಫ್ತುಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.

ಬ್ಲಾಸ್ಟಿಂಗ್ ಹೋಲ್ ಗಳಲ್ಲಿ ಯಾವುದೇ ರೀತಿಯ ಸ್ಪೋಟಕ ಪದಾರ್ಥಗಳನ್ನು ಬಿಟ್ಟು ಬರಬಾರದೆಂದು ಹೇಳಿದರು. ಬ್ಲಾಸ್ಟಿಂಗ್ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಹಾಗೂ ಕೆಂಪು ಧ್ವಜವನ್ನು ಬ್ಲಾಸ್ಟಿಂಗ್ ಮಾಡುವ ಜಾಗದಲ್ಲಿ ಅಳವಡಿಸಬೇಕು ಹಾಗೂ ಒಬ್ಬ ಕಾವಲುಗಾರನನ್ನು ಕ್ವಾರಿ ಜಾಗದಲ್ಲಿ ನೇಮಕ ಮಾಡಬೇಕೆಂದು ಹೇಳಿದರು.

ಯಾವುದೇ ಕಾರಣಕ್ಕೂ ನಮ್ಮ ಮುಖ್ಯ ಉದ್ದೇಶ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ಹೊರತು ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ. ಎಲ್ಲಾ ರೀತಿಯ ನಿಯಮಗಳನ್ನು ಅನುಸರಿಸಿ ಕಾನೂನು ಬದ್ಧ ಕಾರ್ಯಗಳನ್ನು ಮಾಡಲು ಹೇಳಿದರು.

ಮ್ಯಾಗಜಿನ್ ಗಳ ಆಮದು ಹಾಗೂ ವಸ್ತುಗಳ ಕುರಿತಂತೆ ಎಲ್ಲಾ ವಾಹನಗಳ ಸಾಗಾಟದ ವಿವರ ಮ್ಯಾಗಜಿನ್ ಗಳ ಸಂಖ್ಯೆಗಳನ್ನು, ಮ್ಯಾಗಜಿನ್ ಸಂಗ್ರಹಣೆಗಳ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸಬೇಕು ಇಲ್ಲವಾದರೆ, ಈ ಸ್ಫೋಟಕಗಳು ಭಯೋತ್ಪಾದಕರ ಕೈ ಸೇರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಎಚ್ಚರಿಕೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಜಿಲ್ಲೆಯಲ್ಲಿ ತಾಲೂಕಿನ ಪೊಲೀಸ್ ಉಪಾಧೀಕ್ಷಕರು, ಜಿಲ್ಲೆಯ ಎಲ್ಲ ಸಿಪಿಐಗಳು ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಕ್ವಾರಿ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button