
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉಗಾರ ಖುರ್ದ್ ದಲ್ಲಿ 2-3 ದಿನಗಳ ಹಿಂದೆ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಯಿಂದ ಸುರೇಶ ಕಾಂಬಳೆ ಅವರ ಮನೆಯ ಮೇಲಿನ ಛಾವಣಿ ಹಾಗೂ ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ಅವರ ಮನೆಗೆ ಶ್ರೀನಿವಾಸ ಶ್ರೀಮಂತ ಪಾಟೀಲ ಭೇಟಿ ನೀಡಿದರು.
ಸಿಲಿಂಡರ್ ಸ್ಫೋಟಗೊಂಡು ಹಾನಿಯಾದ ಮಾರುತಿ ರಾಮು ಕೊರಬು ಅವರ ಮನೆಗೆ ಕಾಗವಾಡ ಮತಕ್ಷೇತ್ರದ ಯುವ ನಾಯಕರಾದ ಶ್ರೀನಿವಾಸ ಶ್ರೀಮಂತ ಪಾಟೀಲ ಅವರು ಭೇಟಿನಿಡಿ, ನಮ್ಮ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಹಾಗೂ ಶಾಸಕರ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದರು.
ಅದೇ ರೀತಿ ಮೊನ್ನೆ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಮಾರುತಿ ರಾಮು ಕೊರಬು ಅವರ ಮನೆಗೆ ಭೇಟಿಯಾಗಿ ಪರಿಹಾರಧನ ನೀಡಿದ್ದರು ಇವತ್ತು ನಮ್ಮ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸುರೇಶ ಕಾಂಬಳೆ ಅವರಿಗೆ ನೀಡಲಾದ ಪರಿಹಾರ ಧನವನ್ನು ಉಗಾರ ಖುರ್ದ್ ಪುರಸಭೆಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ವಿತರಿಸಿದರು.
ಬೃಹದಾಕಾರದ ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ದಿನಗಣನೆ: ಪರಿಶೀಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ