Latest

ಸೋಮಶೇಖರ.ಕೆ ಅವರಿಗೆ ಡಾಕ್ಟರೇಟ್ -ನೆಲ್ಸನ್ ಮಂಡೇಲಾ ನೊಬೆಲ್ ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗ್ಲೋಬಲ್ ಬಿಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಕಳೆದ 22 ವರ್ಷಗಳಿಂದ ಸಾಮಾಜಿಕ ಸೇವೆ ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವ್ಯವಹಾರದಲ್ಲಿ ಮಾಡಿರುವ ಅವಿರತ ಸಾಧನೆಗೆ ಕೆ. ಸೋಮಶೇಖರ್ ಅವರಿಗೆ ದಿ ಅಮೆರಿಕನ್ ಯೂನಿವರ್ಸಿಟಿ ‘ಡಾಕ್ಟರ್ ಆಫ್ ಫಿಲಾಸಫಿ’ ಡಾಕ್ಟರೇಟ್ ಪದವಿ ಹಾಗೂ 2020ನೇ ಸಾಲಿನ ನೆಲ್ಸನ್ ಮಂಡೇಲಾ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಸಿದ್ಧ ಟೆನ್ನಿಸ್ ಆಟಗಾರ ಪದ್ಮಶ್ರೀ ಪದ್ಮಭೂಷಣ ಲಿಯಾಂಡರ್ ಪೇಸ್, ಭಾರತ ಚಿತ್ರರಂಗದ ನಟಿ ಜರೀನ್ ಖಾನ್ ಮತ್ತು ಭಾರತದ ಪ್ರಸಿದ್ಧ ಕುಸ್ತಿ ಪಟು ಸಂಗ್ರಾಮ ಸಿಂಗ್ ಇವರು ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ನೆಲ್ಸನ್ ಮಂಡೇಲಾ ನೊಬೆಲ್ ಪೀಸ್ ಅಕಾಡೆಮಿಯ ಅಧ್ಯಕ್ಷ ಡಾ.ರಾಜಕುಮಾರ್ ಟಾಕ್, ಚೇರಮನ್ ಪ್ರೊ.ಡಾ. ಮಧು ಕೃಷ್ಣನ್, ಎಂಪವರ್ ಟ್ರೈನರ್ಸ ಸಂಸ್ಥೆಯ ಅಧ್ಯಕ್ಷ ಘನಶ್ಯಾಮ್ ಕೊಳಂಬೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನವರಾದ ಇವರು ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಪೂರೈಸಿ ; ಈ ಉನ್ನತ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಅವರ ಸಾಧನೆಗೆ ಅವರ ಅಭಿಮಾನಿ ಬಳಗ ಹಾಗೂ ಗೆಳೆಯರು ಹಿತೈಷಿಗಳು ಅಭಿನಂದಿಸಿದ್ದಾರೆ.

Home add -Advt

Related Articles

Back to top button