
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ವೀರಭದ್ರೇಶ್ವರ- ಕಾಡದೇವರ ಮಠ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ವತಿಯಿಂದ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಶ್ರಿ ವೀರಭದ್ರೇಶ್ವರ- ಕಾಡದೇವರ ಮಠ ಹಾಗೂ ಜೊಲ್ಲೆ ಚ್ಯಾರಿಟಿ ಫೌಂಡೇಶನ್ ಆಶ್ರಯದಲ್ಲಿ ಕಾಡಸಿದ್ದೇಶ್ವರ ಭವನದಲ್ಲಿ 10 ಆಕ್ಸಿಜನ್ ಹಾಸಿಗೆ ಕೋವಿಡ್ ಆಸ್ಪತ್ರೆ ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಹಾಗೂ ಯಡೂರಿನ 1008 ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಜೋತೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಚಾಲನೆಯನ್ನು ನೀಡಿದರು.
ಯಡೂರ, ಚಂದೂರ, ಮಾಂಜರಿ, ಇಂಗಳಿ ಸೇರಿದಂತೆ ವಿವಿಧ ಗ್ರಾಮಗಳ ಕೊರೋನಾ ರೋಗಿಗಳ ಅನುಕೂಲಕ್ಕಾಗಿ ಯಡೂರಿನ ಗಡಿಭವನದಲ್ಲಿ 10 ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನು ತೆರೆಯಲು ಯಡೂರಿನ ಶ್ರಿ ವೀರಭದ್ರೇಶ್ವರ ಕಾಡಸಿದ್ದೆಶ್ವರ ಮಠ ಹಾಗೂ ಜೊಲ್ಲೆ ಚ್ಯಾರಿಟ ಫೌಂಡೇಶನ್ ಮುಂದೆ ಬಂದಿವೆ.ಇವತ್ತು ಈ ಕೋವಿಡ್ ಆಸ್ಪತ್ರೆಗೆ ಶ್ರಿಶೈಲ್ ಜದ್ಗುರುಗಳು ಹಾಗೂ ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರು ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಗಡಿಭಾಗದಲ್ಲಿ ಕೊರೋನಾ ರೋಗಿಗಳ ಅನುಕೂಲಕ್ಕಾಗಿ ಶ್ರಿಶೈಲ್ ಜದ್ಗುರುಗಳ ಸಹಕಾರದಿಂದ ಜೊಲ್ಲೆ ಚಾರಿಟಿ ಫೌಂಡೇಶನ್ ಆಶ್ರಯದಲ್ಲಿ ಯಡೂರಿನ ಶ್ರಿವೀರಭದ್ರಶ್ವೆರ ದೇವಸ್ಥಾನದ ಗಡಿಭವನದಲ್ಲಿ ಬಡಮಧ್ಯಮ ವರ್ಗದ ಕೊರೋನಾ ಸೋಂಕಿತರ ಅನುಕೂಲಕ್ಕಾಗಿ 10 ಬೆಡಗಳ ಆಸ್ಪತ್ರೆ ಆರಂಭಿಸಿದ್ದೆವೆ.ಈ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ನಂತರ ಸಾನಿಧ್ಯ ವಹಿಸಿದ್ದ ಶ್ರಿಶೈಲ್ ಜದ್ಗುರುಗಳು ಮಾತನಾಡಿ ಸುತ್ತಮುತ್ತಲಿನ ಹಳ್ಳಿಗಳಲ್ಲಿಗಿಂತ ಯಡೂರ ಗ್ರಾಮದಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬ ವಿಷಯವನ್ನು ಅರಿತು ಕೋರೊನಾದ ನಿಯಂತ್ರಣಕ್ಕಾಗಿ ಶ್ರಿವೀರಭದ್ರಶ್ವೆರ ದೇವಸ್ಥಾನದ 2 ಕಲ್ಯಾಣಭವನಗಳನ್ನು ಕೋವಿಡ್ ಆಸ್ಪತ್ರೆ ಆರಂಭಿಸಲು ತಾತ್ಕಾಲಿಕವಾಗಿ ಜಿಲ್ಲಾಡಳಿತ ಕ್ಕೆ ಹಸ್ತಾಂತರಿಸಲಾಯಿತು.. ಈ ವಿಷಯವನ್ನು ತಿಳಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕೊರೋನಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲು ಮುಂದೆ ಬಂದಿದ್ದಾರೆ. ಈ ಗಡಿಭವನದ ಕೋವಿಡ್ ಸೆಂಟರ್ ನಲ್ಲಿ ಸಂಸದ ಜೊಲ್ಲೆ ಅವರು ಆಕ್ಷಿಜನ,ಡಾಕ್ಟರ್ಸ,ನರ್ಸಗಳು ಸೇರಿ ಕೊರೋನಾ ಸೋಂಕಿತರಿಗೆ ಯಾವುದೇ ಖರ್ಚು,ವೆಚ್ಚವಿಲ್ಲದೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲು ಮುಂದಾಗಿರುವ ಸಂಸದ ಜೊಲ್ಲೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರಿಶೈಲ ಜದ್ಗುರುಗಳು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಬಸವಜ್ಯೋತಿ ಯುಥ ಫೌಂಡೇಶನ್ ನ ಅಧ್ಯಕ ಬಸವಪ್ರಸಾದ ಜೋಲ್ಲೆ, ತಹಶೀಲ್ದಾರ ಪ್ರವೀಣ ಜೈನ,ಸಿಪಿಐ ಆರ್ ಆರ್ ಪಾಟೀಲ, ಪಿ ಎಸ್ ಐ ಲಕ್ಷ್ಮಣಪ್ಪ ಆರಿ,ಶಿವತೇಜ ಫೌಂಡೇಶನ್ ಅಧ್ಯಕ್ಷ ಅಜಯ ಸೂರ್ಯವಂಶಿ,ಉಪಾಧ್ಯಕ್ಷ ಅಮರ ಬೋರಗಾಂವೆ, ಅಣ್ಣಾಸಾಹೇಬ ಪವಾರ,ಮನೋಜ ಕೀಚಡೆ,ಅಪಯ್ಯಾ ಸ್ವಾಮಿಜಿ ,ಚಿದಾನಂದ ಕೋಳಿ, ಅಮರ ಯಾದವ, ಡಾ. ಸಲಗರೆ,ಡಾ ಬೇಣ್ಣೆ,ಡಾ. ಭೋಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ