Latest

*ಬೆಳಗಾವಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ: ಮಚ್ಚು, ಲಾಂಗ್ ಹಿಡಿದು ಝಳಪಿಸಿದ ಯುವಕರು*

ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿರುವ ಘಟಬೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

ಮಹಾ ನವಮಿ ದಿನ ನಡೆದಿದ್ದ ಸಣ್ಣ ಗಲಾಟೆ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆಯಾಗಿದೆ. ಕ್ಷುಲಕ ವಿಚಾರಕ್ಕೆ ಲಾಂಗು,ಮಚ್ಚು ಹಿಡಿದುಕೊಂಡು ಯುವಕರ ಗ್ಯಾಂಗ್ ದಾಳಿಗೆ ಬಂದಿದೆ.

ಸಾರ್ವಜನಿಕವಾಗಿ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಓಡಾಟ ನಡೆಸಿದ್ದರೆ. ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹಳ್ಳೂರ-ಗುರ್ಲಾಪುರ ಗ್ರಾಮದ ಯುವಕರ ಗಲಾಟೆ ನಡೆದ ಆಗಿರೋ ಮಾಹಿತಿಲಭ್ಯವಾಗಿದೆ.

Home add -Advt

ಕೈಯಲ್ಲಿ ಲಾಂಗ್ ಹಿಡಿದು ಹಳ್ಳೂರ ಗ್ರಾಮದ ಯುವಕರನ್ನ ಹೊಡೆಯಲು ಬಂದಿದ್ದ ಮತ್ತೊಂದು ಗ್ರಾಮದ ಯುವಕರು. ಈ ವೇಳೆ ಸ್ಥಳೀಯರು ಲಾಂಗು,ಮಚ್ಚು ಹಿಡಿದುಕೊಂಡು ಬಂದಿದ್ದ ಯುವಕರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಾ ನವಮಿ ದಿನ ಡಿಜೆ ಸಾಂಗ್ಸ್ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ ನಡೆದು ಅದೇ ಸೇಡು ಇಟ್ಟುಕೊಂಡು ಹಳ್ಳೂರ ಗ್ರಾಮದ ಯುವಕರ ಮೇಲೆ ಹಲ್ಲೆಗೆ ಮತ್ತೊಂದು ಗ್ಯಾಂಗ್ ನ ಯುವಕರು ಮುಂದಾಗಿದ್ದಾರೆ. ಗುರ್ಲಾಪುರ ಗ್ರಾಮದ ಯುವಕರಿಂದ ಹಳ್ಳೂರ ಗ್ರಾಮದ ಯುವಕರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಹಲ್ಲೆ ಮಾಡುವ ವೇಳೆ ಬಿಡಿಸಿಲು ಹೋದ ಸ್ಥಳೀಯರ ಕೈಗೂ ಗಾಯಗಳಾಗಿವೆ. ಎಸ್ಪಿ ಗ್ಯಾಂಗ್ ಎಂಬ ವಾಟ್ಸಪ್ ಗ್ರೂಪ್ ಹೊಂದಿದ ಯುವಕರಿಂದ ಹಲ್ಲೆ ನಡೆದಿದ್ದು, ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button