National

*ಉಗ್ರ ತಹವೂರ್ ರಾಣಾಗೆ 18 ದಿನ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ*

ಪ್ರಗತಿವಾಹಿನಿ ಸುದ್ದಿ : 26/11 ಮುಂಬೈ ದಾಳಿಕೋರ ತಹವೂರ್‌ ರಾಣಾನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 18 ದಿನಗಳ ಎನ್ ಐ ಎ ಕಸ್ಟಡಿಗೆ ನೀಡಲಾಗಿದೆ.

ಎನ್ ಐ ಎ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಜೈಲಿನ ವಾಹನ ಸೇರಿ ಬುಲೆಟ್ ಪೂಫ್ ವಾಹನ, ಅತ್ಯಂತ ಸುರಕ್ಷಿತ ಮತ್ತು ಶಸ್ತ್ರಸಜ್ಜಿತ ಮಾರ್ಕ್ಸ್ಮನ್ ವಾಹನ, SWAT ಕಮಾಂಡೋಗಳ ನೇತೃತ್ವದಲ್ಲಿ ಬಿಗಿ ಭದ್ರತೆಯಿಂದ ರಾಣಾನನ್ನು ನ್ಯಾಯಾಲಯಕ್ಕೆ ಕರೆತರಲಾಯಿತು.

Home add -Advt

ವಿಶೇಷ ಎನ್‌ಐಎ ನ್ಯಾಯಾಧೀಶರಾದ ಚಂದರ್‌ಜಿತ್ ಸಿಂಗ್ ಅವರು ಈ ಕೇಸ್‌ನ ವಿಚಾರಣೆ ನಡೆಸಿದ್ದು, ರಾಣಾನನ್ನು ಎನ್‌ಐಎನ ಕೇಂದ್ರ ಕಚೇರಿಯ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಎನ್‌ಐಎ ಪರ ವಕೀಲರು ತಿಳಿಸಿದರು.

ವಿಚಾರಣೆ ಶುರು ಮಾಡುವ ವೇಳೆ, ನಿಮ್ಮ ಪರವಾಗಿ ವಾದ ಮಂಡಿಸಲು ವಕೀಲರು ಇದ್ದಾರಾ ಎಂದು ರಾಣಾನನ್ನು ನ್ಯಾಯಾಧೀಶರು ಕೇಳಿದರು. ಅದಕ್ಕೆ ಆತ, ಇಲ್ಲ ಎಂದು ಉತ್ತರಿಸಿದ್ದ. ಕೂಡಲೇ, ದೆಹಲಿ ಕಾನೂನು ಸೇವಾ ಪ್ರಾಧಿಕಾರದಿಂದ ನಿಮ್ಮ ಪರವಾಗಿ ವಾದ ಮಂಡಿಸಲು ಒಬ್ಬ ವಕೀಲರನ್ನು ನಿಯೋಜಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.

ತಹವೂ‌ರ್ ರಾಣಾನನ್ನು 20 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತು. 2008ರ ಮುಂಬಯಿ ದಾಳಿಗೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕೆ ಅಷ್ಟು ದಿನಗಳ ಕಾಲಾವಕಾಶ ಬೇಕು ಎಂದು ವಾದಿಸಿತು. ನ್ಯಾಯಾಲಯದಲ್ಲಿ ತಡರಾತ್ರಿವರೆಗೂ ವಾದ-ಪ್ರತಿವಾದ ಮುಂದುವರಿದು ಕೊನೆಗೆ, ರಾಣಾನನ್ನು 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿ ಆದೇಶ ಹೊರಡಿಸಿದೆ.

Related Articles

Back to top button