ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರದ ರೈಲ್ವೆ ಟ್ರ್ಯಾಕ್ ಬಳಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 28ರಂದು ಖಾನಾಪುರದ ರೈಲ್ವೆ ಟ್ರ್ಯಾಕ್ ಬಳಿ ಯುವಕ ಅರ್ಬಾಜ್ ಎಂಬಾತನ ಶವ ಪತ್ತೆಯಾಗಿತ್ತು. ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕೆ ಯುವತಿ ಕಡೆಯವರೇ ಅರ್ಬಾಜ್ ನನ್ನು ಭೀಕರವಾಗಿ ಕೊಲೆ ಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಬೆಳಗಾವಿ ಪೊಲೀಸರು ಇದೀಗ ಈ ಪ್ರಕರಣವನ್ನು ಭೇದಿಸಿಸಿದ್ದು, ಯುವತಿಯ ಕಡೆಯ 10 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಮುಸ್ಲೀಂ ಆರೋಪಿ ಎಂಬುದು ತಿಳಿದುಬಂದಿದೆ.
ಹಿಂದೂ ಯುವತಿಯನ್ನು ಪ್ರೀತಿಸಿದ್ದ ಯುವಕ ಅರ್ಬಾಜ್ ಗೆ ಯುವತಿ ಮನೆಯವರು ತಮ್ಮ ಮಗಳನ್ನು ಬಿಟ್ಟುಬಿಡುವಂತೆ ಬುದ್ಧಿ ಹೇಳಿದ್ದರು. ಆದರೂ ಕೇಳದ ಯುವಕ ಯುವತಿಯೊಂದಿಗೆ ವಿವಾಹಕ್ಕೂ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಹಲವುಬಾರಿ ಎಚ್ಚರಿಸಿದರೂ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ಯುವಕನನ್ನು ಯುವತಿಯ ಮನೆಯವರೇ ಹತ್ಯೆ ನಡೆಸಿದ್ದಾರೆ ಎನ್ನಲಾಗಿತ್ತು. ಇದೀಗ ಹತ್ಯೆ ಪ್ರಕರಣ ಸಂಬಂಧ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಡಲೀಕ ಮಹಾರಾಜ ನಾಗಪ್ಪ ಮುತಗೇಕರ, ಕುತಬುದ್ದೀನ್ ಅಲ್ಲಾಭಕ್ಷ ಬೇಪಾರಿ, ಸುಶೀಲಾ ಈರಪ್ಪ ಕುಂಬಾರ, ಮಾರುತಿ ಪ್ರಹ್ಲಾದ ಸುಗತ, ಮಂಜುನಾಥ ತುಕಾರಾಮ ಗೊಂದಲ, ಗಣಪತಿ ಜ್ಞಾನೇಶ್ವರ ಸುಗತಿ, ಈರಪ್ಪ ಬಸವಣ್ಣಿ ಕಂಬಾರ, ಪ್ರಶಾಂತ ಕಲ್ಲಪ್ಪಾ ಪಾಟೀಲ್, ಪ್ರವೀಣ್ ಶಂಕರ ಪೂಜೇರಿ, ಶ್ರೀಧರ ಮಹಾದೇವ ಡೋಣಿ ಎಂದು ಗುರುತಿಸಲಾಗಿದೆ.
ಬಂಧಿತರ ವಿರುದ್ದ ಐಪಿಸಿ ಸೆಕ್ಷನ್ 302, 201, 341, 120, 384, 388 ಹಾಗೂ 149 ಅಡಿ ಪ್ರಕರಣ ದಾಖಲಾಗಿದೆ.
ಫಲಿಸದ ಚಿಕಿತ್ಸೆ ತಂದೆಯ ಗುಂಡೇಟು ತಿಂದ ಬಾಲಕ ದಾರುಣ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ