Kannada NewsKarnataka NewsLatestNational

ಗಲಭೆ ಪೀಡಿತ ಬಾಂಗ್ಲಾದಿಂದ ಬಚಾವ್ ಆಗಿ ಬೆಳಗಾವಿಗೆ ಬಂದ 25 ವೈದ್ಯಕೀಯ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಲಭೆ ಪೀಡಿತ ಬಾಂಗ್ಲಾದಿಂದ ಬಚಾವ್ ಆಗಿ 25 ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಳಗಾವಿಗೆ ತಲುಪಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೆರವಿನಿಂದ ಬಾಂಗ್ಲಾದೇಶದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ಮನೆ ಸೇರಿದ್ದಾರೆ.

ಬಾಂಗ್ಲಾದಿಂದ ಬೆಳಗಾವಿಗೆ ಬಂದ ವೈದ್ಯಕೀಯ ವಿದ್ಯಾರ್ಥಿ ನೇಹಲ್ ಸವಣೂರು ಮಾತನಾಡಿ, ಈ ಸಮಯದಲ್ಲಿ ಬಾಂಗ್ಲಾದಲ್ಲೇ  ಇದ್ದಿದ್ದರೆ ರೂಂನಲ್ಲಿ ಕೂಡಿ ಹಾಕಿ ಹಿಂಸೆ ಕೊಡುತ್ತಿದ್ದರು. ಬಾಂಗ್ಲಾದಲ್ಲಿನ ಹಿಂಸಾಚಾರದ ಭಯಾನಕ ಘಟನೆ ನೆನಪಿಸಿಕೊಂಡ ವಿದ್ಯಾರ್ಥಿ, ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಸಾಕಷ್ಟು ನೋವು ಅನುಭವಿಸಿದೇವು. ಎಲ್ಲ ಕಡೆಯೂ ಕರ್ಪ್ಯೂ ಇತ್ತು, ಊಟಕ್ಕೂ ಪರದಾಡಬೇಕಾಯಿತು. ಎರಡೇ ನಿಮಿಷದಲ್ಲಿ ತಿನ್ನೋಕೆ ಏನಾದರೂ ತಂದು ರೂಂ ಸೇರುತ್ತಿದ್ದೆವು ಎಂದರು.

ಲೇಡಿಸ್ ಹಾಸ್ಟೆಲ್ ಹತ್ರ ಸಮಸ್ಯೆ ಬಹಳಷ್ಟು ಇದ್ದವು, ಅಲ್ಲಿ ಊಟವೂ ಇರಲಿಲ್ಲ. ಹಿಂದೂಗಳನ್ನೇ ಬಾಂಗ್ಲಿಗರು ಟಾರ್ಗೆಟ್ ಮಾಡೋಕೆ ಶುರು ಮಾಡಿದ್ದರು. ನೆಟ್ವರ್ಕ್ ಕೂಡ ಇರಲಿಲ್ಲ, ಪೋಷಕರ ಜೊತೆಗೆ ಮಾತನಾಡಲೂ ಆಗಲಿಲ್ಲ‌. ಬಾಂಗ್ಲಾದಲ್ಲಿ ನಾನೂ ಭಯಭೀತನಾಗಿದ್ದೆ, ಈಗಿನ ಪರಿಸ್ಥಿತಿ ‌ಇನ್ನೂ ಭಯಂಕರ ಇದೆ ಎಂದರು.

Home add -Advt

https://pragativahini.com/d-link-facility-for-house-changers-opportunity-to-avail-griha-jyoti-benefit

Related Articles

Back to top button