Kannada NewsKarnataka NewsLatest
ಬೆಳಗಾವಿ: ಉಪಚುನಾವಣೆ ಮಾದರಿ ಮತಪತ್ರ ;ಯಾರದ್ದು ಯಾವ ನಂಬರ್?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಚುನಾವಣೆ ಮಾದರಿ ಮತಪತ್ರ ಪ್ರಕಟಿಸಲಾಗಿದೆ. ಬಿಜೆಪಿಯ ಮಂಗಲಾ ಅಂಗಡಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ 2ನೇ ಸ್ಥಾನದಲ್ಲಿದ್ದಾರೆ.
ಅಂತಿಮವಾಗಿ 10 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ -ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿಯಾಗಲಿದ್ದು, ಭರ್ಜರಿ ಪ್ರಚಾರ ನಡೆದಿದೆ. ಕೊರೋನಾ ಮಾರ್ಗಸೂಚಿ ಇರುವುದರಿಂದ ದೊಡ್ಡ ದೊಡ್ಡ ರ್ಯಾಲಿಗಳು ನಡೆಯುತ್ತಿಲ್ಲ. ಆದರೆ ಎಲ್ಲ ಕಡೆ ಮುಖಂಡರು ಸಣ್ಣ ಸಣ್ಣ ಸಭೆ ಆಯೋಜಿಸಿ ಪ್ರಚಾರ ನಡೆಸುತ್ತಿದ್ದಾರೆ.
ಬಹಿರಂಗ ಸಮಾವೇಶಕ್ಕಿಂತ ಇಂಡೋರ್ ಸಮಾವೇಶಗಳೇ ಹೆಚ್ಚು. ಪ್ರಚಾರಕ್ಕೆ ಇನ್ನು ಕೇವಲ 10 ದಿನ ಉಳಿದಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆ: ಕಣದಲ್ಲಿ 10 ಅಭ್ಯರ್ಥಿಗಳು





