*ಬೆಳಗಾವಿ ಅರಣ್ಯ ಇಲಾಖೆಯಿಂದ ತುರ್ತು ನಿಯಂತ್ರಣ ಕೊಠಡಿ ಸ್ಥಾಪನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಗಾರು ಮಳೆ ಗಾಳಿಗೆ ಬೆಳಗಾವಿ ನಗರದ ರಸ್ತೆ ಅಕ್ಕಪಕ್ಕದಲ್ಲಿರುವ ಮರಗಳು ಮತ್ತು ಅದರ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುವ ಜನರ, ವಾಹನ ಸಂಚಾಲಕು ಮತ್ತು ವಾಹನಗಳ ಮೇಲೆ ಬಿದ್ದು ಜೀವಹಾನಿ, ಆಸ್ತಿ ಹಾನಿಯಾಗುವ ಸಂಭವವಿರುವುದರಿಂದ ಅಂತಹ ಮರಗಳನ್ನು ಜಂಟಿಯಾಗಿ ಸರ್ವೆ ಮಾಡಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸಲು ಅವಶ್ಯಕವಾದ ಪರಿಕರಗಳನ್ನು ಹಾಗೂ ಸಿಬ್ಬಂದಿಗಳನ್ನು ಸದಾ ಸಿದ್ಧತೆಯಲ್ಲಿಡಲು ತಂಡವನ್ನು ರಚಿಸಿ ತುರ್ತು ಪ್ರತಿಕ್ರಿಯೆ ತಂಡವನ್ನು ಸಹ ರಚಿಸಿ ಕಾರ್ಯೋನ್ಮುಖಗೊಳಿಸುವುದು ಹಾಗೂ ದಿನದ 24 ಗಂಟೆ ಚಾಲನೆಯಲ್ಲಿರುವಂತೆ ಅರಣ್ಯ ಇಲಾಖೆ ವತಿಯಿಂದ ತುರ್ತು ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಲಾಗಿರುತ್ತದೆ.
ಸಂಪರ್ಕ ವಿವರ: ಸೋಮವಾರ ಅಶೋಕ ಲಾಳಸಂಗಿ ದೂ.ಸಂ. 9972773370 ಹಾಗೂ ಗಿರೀಶ ಎಸ್. ಬಣ್ಣದ 9972964715, ಮಂಗಳವಾರ ಎಂ.ಬಿ. ಜೋತೆನ್ನವರ ದೂ.ಸಂ. 9743788585 ಹಾಗೂ ಪ್ರಶಾಂತ ತಳವಾರ 9880997974, ಬುಧವಾರ ಮಂಜುನಾಥ ಹುಣಶ್ಯಾಳಿ ದೂ.ಸಂ. 9482471058 ಹಾಗೂ ಶರಣಬಸವೇಶ್ವರ ಹತ್ತರಕಿ 9449400498, ಗುರುವಾರ ನೂರಅಲಿ ನದಾಫ್ 9632146786 ಹಾಗೂ ಸರಪರಾಜ ಜಕಾತಿ 7795764700, ಶುಕ್ರವಾರ ಡಿ.ಎಸ್. ಭಂಡಿ 9480347287 ಹಾಗೂ ವಿಠಲ ಬೋರುಟಗಿ 9008380640, ಶನಿವಾರ ಅಶೋಕ ಲಾಳಸಂಗಿ 9972773370 ಹಾಗೂ ಗಿರೀಶ ಎಸ್ ಬಣ್ಣದ 9972964715, ಭಾನುವಾರ ಮಂಜುನಾಥ ಹುಣಶ್ಯಾಳಿ 9482471058 ಹಾಗೂ ಶರಣಬಸವೇಶ್ವರ ಹತ್ತರಕಿ 9449400498 ಈ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ವಲಯದ ವಲಯ ಅರಣ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



