Uncategorized

*ಲವ್ ಮಾಡುವಂತೆ ಶಿಕ್ಷಕಿ ಮಗನ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಿಕ್ಷಕಿಯ ಮಗನ ಕಿರುಕುಳದಿಂದ ಮನನೊಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಪಾರ್ವತಿಪುರದಲ್ಲಿ ನಡೆದಿದೆ.

ಸಾರಾ (16) ಮೃತ ವಿದ್ಯಾರ್ಥಿನಿ. ಮಗಳ ಸಾವಿಗೆ ಶಿಕ್ಷಕಿ ಹಾಗೂ ಆಕೆಯ ಮಗನೇ ಕರಣ ಎಂದು ಪೋಷಕರು ಹೊಸಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

Home add -Advt

ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಎಸ್.ಎಸ್.ಎಲ್ ಸಿ ಓದುತ್ತಿದ್ದ ಸಾರಾಳಿಗೆ ಶಿಕ್ಷಕಿಯ ಮಗ ಲವ್ ಮಾಡುವಂತೆ ಪೀಡಿಸುತ್ತಿದ್ದನಂತೆ. ಸಾರಾ ಒಪ್ಪದ ಕಾರಣ ಆಕೆಗೆ ಕಿರುಕುಳ ನೀಡುತ್ತಿದ್ದನಂತೆ. ವಿದ್ಯಾರ್ಥಿನಿ ಸಾವಿಗೆ ಶಿಕ್ಷಕಿ ನೀಡಿದ ಪ್ರಚೋದನೆಯೂ ಕಾರಣ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಸಾವಿನ ಬಳಿಕ ಶಿಕ್ಷಕಿ ವಿಷಯ ಎಲ್ಲೂ ಬಾಯ್ಬಿಡದಂತೆ ಸಾರಾಳ ಸ್ನೇಹಿತರಿಗೆ ಶಿಕ್ಷಕಿ ಧಮ್ಕಿ ಹಾಕಿದ್ದಾರಂತೆ. ಈಗ ಸಾರಾ ಸಾವಿನ ವಾರದ ಬಳಿಕ ಆಕೆಯ ಸ್ನೇಹಿತರು ಸಾರಾ ಸಾವಿನ ಹಿಂದಿನ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಕಣ್ಣೀರಿಟ್ಟಿದ್ದಾರೆ.

ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು ತನಿಖೆ ನಡೆಸಿದ್ದಾರೆ.


Related Articles

Back to top button