Belagavi NewsBelgaum NewsCrimeKannada NewsKarnataka NewsNationalTravel

*ಗೋವಾದ ಸತ್ತಾರಿ ಫಾಲ್ಸ್‌ನಲ್ಲಿ ದಾರುಣವಾಗಿ ಸಾವನ್ನಪ್ಪಿದ ಬೆಳಗಾವಿ ಯುವಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಆದಿತ್ಯ ದೀಪಕ್ ಕುಮಾರ್ ಸತ್ಪತಿ (20) ಎಂಬ ಯುವಕ ಗೋವಾದ ಸತ್ತಾರಿ ತಾಲೂಕಿನ ಸುರಲ್ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 

ಭಾನುವಾರ ಸನ್ನೇಹಿತರ ಜೊತೆ ದೀಪಕ್ ಹೋಗಿದ್ದ ಈ ವೇಳೆ ದುರ್ಘಟನೆ ನಡೆದಿದೆ. ನೀರಿನ ಆಳ ಹಾಗೂ ಹರಿವಿನ ಬಗ್ಗೆ ಅರಿವಿಲ್ಲದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತರು ಅವರನ್ನು ರಕ್ಷಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ವಾಲ್ಪೈ ಪೊಲೀಸರು, ಮಹಾದಾಯಿ ಅಭಯಾರಣ್ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿದ್ದಾರೆ.

ಭಾರೀ ಮಳೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು, ಸೋಮವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯುವಕ ಮೃತ ದೇಹ ಪತ್ತೆ ಯಾಗಿದೆ. 

ಆದಿತ್ಯ ಮೂಲತಃ ಒಡಿಶಾದವರಾಗಿದ್ದು, ಅವರ ಕುಟುಂಬ ಜೊತೆ ಬೆಳಗಾವಿಯಲ್ಲಿ ವಾಸವಾಗಿದ್ದ. ಅವರ ತಂದೆ ದೀಪಕ್ ಕುಮಾರ್ ಸತ್ಪತಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಕುಟುಂಬ ಸದಸ್ಯರು ಸ್ಥಳಕ್ಕೆ ತಲುಪಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button