
ಪ್ರಗತಿವಾಹಿನಿ ಸುದ್ದಿ: ಬೆನಕನಹಳ್ಳಿ ಹಾಗೂ ಸಾವಗಾಂವ ರಸ್ತೆಯ ಮಾರ್ಗಮಧ್ಯದಲ್ಲಿರುವ ಹಳ್ಳಕ್ಕೆ ಕಾರೊಂದು ಉರುಳಿ ಬಿದ್ದಿದ್ದು, ಸುದ್ದಿ ತಿಳಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ತಕ್ಷಣ ಸ್ಥಳಕ್ಕೆ ಧಾವಿಸಿದರು.
ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಕಾರು ಬಿದ್ದ ಅರ್ಧ ಗಂಟೆಯಲ್ಲೇ ಸ್ಥಳಕ್ಕೆ ಧಾವಿಸಿದ ಮೃಣಾಲ್ ಹೆಬ್ಬಾಳಕರ್, ಕಾರಿನಲ್ಲಿದ್ದ ವ್ಯಕ್ತಿಗಳ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು.

ಇದೇ ವೇಳೆ ರಸ್ತೆ ಹಾಗೂ ಹಳ್ಳದ ಮಾಹಿತಿ ಪಡೆದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ಮೃಣಾಲ್, ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬ್ರಿಡ್ಜ್ ಗೆ ತಡೆಗೊಡೆ ನಿರ್ಮಾಣ ಮಾಡುವಂತೆ ಹಾಗೂ ಬ್ರಿಡ್ಜ್ ನ ಅಗಲವನ್ನು ಹೆಚ್ಚಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜ್ಯೋತಿಬಾ ಪವಾರ್, ಜ್ಯೋತಿಬಾ ದೇಸೂರಕರ್, ಕಲ್ಲಪ್ಪ ಪಾಟೀಲ, ನಿಂಗಪ್ಪ ಮೋರೆ, ಸಂತೋಷ ಪಾಟೀಲ, ಮಹೇಶ್ ಪಾಟೀಲ, ಸಚಿನ ಪಾಟೀಲ, ಗಣಪತ್ ಕೋರಜಕರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ