National

*ತರಬೇತಿ ವೇಳೆ ಮಗುಚಿ ಬಿದ್ದ ಬೋಟ್: ಇಬ್ಬರು ಕಮಾಂಡೋಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ತರಬೇತಿ ವೇಳೆ ಬೋಟ್ ಮಗುಚಿ ಬಿದ್ದು ಇಬ್ಬರು ಜೂನಿಯರ್ ಕಮಾಂಡೋಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ್ ತಾಲೂಕಿನ ಹಾಜಗೋಳಿ ಬಳಿ ನಡೆದಿದೆ.

ರಾಜಸ್ಥಾನ ಮೂಲದ ವಿಜಯ್ ಕುಮಾರ್ (28) ಹಾಗೂ ಪಶ್ಚಿಮ ಬಂಗಾಳ ಮೂಲದ ದಿವಾಕರ್ ರಾಯ್ (26) ಮೃತರು. ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ಈ ದುರಂತ ಸಂಭವಿಸಿದೆ.

Home add -Advt

ತರಬೇತಿಗೆಂದು 6 ಕಮಾಂಡೋಗಳು ತೆರಳಿದ್ದರು. ಈ ವೇಳೆ ನದಿ ದಾಟುವಾಗ ಬೋಟ್ ಮಗುಚಿ ಬಿದ್ದಿದೆ. ನಾಲ್ವರು ಈಜಿ ದಡ ಸೇರಿದ್ದಾರೆ. ಇಬ್ಬರು ನೀರ‍ಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button