Karnataka News

*ಮಹಾಮಳೆ ಅವಾಂತರ: ಸಿಸಿಬಿ ಕಚೇರಿಗೂ ನುಗ್ಗಿದ ನೀರು; ಪೊಲೀಸ್ ಠಾಣೆಯೂ ಜಲಾವೃತ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರೂ ಪೂರ್ವ ಮಳೆಯ ಅಬ್ಬರ ಹೆಚ್ಚಿದ್ದು, ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.

ಬೆಂಗಳೂರಿನ ಪ್ರತಿಷ್ಟತ ಬಡಾವಣೆಗಳು ಜಾಲವೃತಗೊಂಡಿವೆ, ರಸ್ತೆಗಳು, ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿವೆ. ಮನೆಗಳಿಗೆ ಚರಂಡಿ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿವೆ. ಬಹುತೇಕ ಬಡಾವಣೆಗಳಲ್ಲಿ ನೀರು ಎದೆಯ ಮಟ್ಟಕ್ಕೆ ನಿಂತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶಾಂತಿನಗರ ಸಪೂರ್ಣ ಜಲಾವೃತಗೊಂಡಿದೆ. ಶಾಂತಿನಗರದ ಸಿಸಿಬಿ ಕಛೆರಿ ಆವರಣ ನದಿಯಂತಾಗಿದ್ದು, ಕಚೇರಿಯ ಒಳಭಾಗದಲ್ಲಿ ನೀರು ನಿಂತಿದೆ.

ಮತ್ತೊಂದೆಡೆ ಸಂಪಂಗಿರಾಮನಗರದಲ್ಲಿ ಮಳೆಯ ನೀರುನುಗ್ಗಿ ಪೊಲೀಸ್ ಠಾಣೆ ಜಲಾವೃತವಾಗಿದೆ. ಸಿಬ್ಬಂದಿಗಳೇ ಮಳೆಯ ನೀರನ್ನು ಹೊರ ಹಾಕುವ ಕೆಲಸ ಮಡುತ್ತಿದ್ದಾರೆ.

ಶಾಂತಿನಗರ ಡಿಪೋಗೂ ನೀರು ನುಗ್ಗಿದ್ದು, ಬಿಬಿಎಂಪಿ ಬಸ್ ಗಳು ಬಹುತೇಕ ಮುಳುಗಡೆಯಾಗಿವೆ. ಸಾಯಿಲೇಔಟ್ ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೆ, ಈಜೀಪುರದಲ್ಲಿ ಜನರು ಈಜಿಕೊಂಡೇ ವಾಸಿಸಬೇಕಾದ ಸ್ಥಿತಿ ಎದುರಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button