ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಸ್ಕಾಂ ನಕಲಿ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈಭವ್, ಶಿವಪ್ರಸಾದ್, ವಿಜಯಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ ಬಂಧಿತ ಆರೋಪಿಗಳು. ಅಭ್ಯರ್ಥಿಗಳಿಂದ 20 ಲಕ್ಷ ರೂಪಾಯಿ ಹಣ ಪಡೆದು ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದರು.
ಬೆಂಗಳೂರಿನ ವಿದ್ಯುತ್ ಕಂಪನಿ ಅಧೀಕ್ಷಕರ ಹೆಸರಿನಲ್ಲಿ ಹಾಗೂ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿ ಕುಟೀವ್ ಇಂಜಿನಿಯರ್ ಹೆಸರಲ್ಲಿ ನಕಲಿ ಸೀಲು ಹಾಕಿ ನೇಮಕಾತಿ ಆದೇಶ ಪತ್ರ ನೀಡಿದ್ದರು. ನೇಮಕಾತಿ ಆದೇಶ ಪತ್ರ ಪಡೆದು ಬೆಸ್ಕಾಂಗೆ ಹೋದಾಗಲೇ ಉದ್ಯೋಗಾಕಾಂಕ್ಷಿಗಳಿಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ.
https://pragati.taskdun.com/santosh-ladreactionodisha-train-tragidy/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ