Latest

ಆ್ಯಪ್ ಗಳ ಮೂಲಕ ಬೆಟ್ಟಿಂಗ್ ಧಂದೆ; ಕಿಂಗ್ ಪಿನ್ ಬಂಧನ

ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ: ಆ್ಯಪ್ ಗಳನ್ನು ಬಳಸಿ ಬೆಟ್ಟಿಂಗ್ ಧಂದೆ ವ್ಯಾಪಕವಾಗಿದ್ದು ಇದರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕಿಂಗ್ ಪಿನ್ ಆರೋಪಿಯನ್ನು ಬಂಧಿಸಿದ್ದಾರೆ.

ಸತೀಶ ಎಂಬಾತ ಬಂಧಿತ. ಇವನೊಂದಿಗೆ ಶಾಮೀಲಿದ್ದ ಇನ್ನೂ ಮೂವರು ಆರೋಪಿತರು ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಯಿಂದ 7,20,000 ರೂ. ನಗದು, 3 ಮೊಬೈಲ್ ಫೋನ್ ಮತ್ತು 1 ಬೈಕ್  ಜಪ್ತಿ ಮಾಡಲಾಗಿದೆ.

ಕಾರ್ತಿಕ್  ಎಂಬಾತ ಸ್ನೇಹಿತ ಸತೀಶನ ಆನ್ ಲೈನ್ ವೆಬ್ ಸೈಟ್ ಆ್ಯಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ. ಸತೀಶ ಆನ್ ಲೈನ್ ಬೆಟ್ಟಿಂಗ್ ವೆಬ್ ಸೈಟ್​ಗಳಲ್ಲಿ ಹೂಡಿಕೆ ಮಾಡಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸತೀಶ​ನಿಗೆ ಕಾರ್ತಿಕ್ ಹಣ ನೀಡುತ್ತಲೂ ಇದ್ದ. ಆದರೆ, ನಂತರದಲ್ಲಿ ಹಣ ಕೇಳಿದಾಗ 3 ಲಕ್ಷ ರೂ.ಗಳನ್ನು ಸತೀಶ್ ವಾಪಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ.

ಬೆಟ್ಟಿಂಗ್ ಧಂದೆ ಹದ್ದುಮೀರಿರುವ ಮಾಹಿತಿ ಪಡೆದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಇದೀಗ ಜಾಲದ ಪ್ರಮುಖ ಕೊಂಡಿಗಳೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.

ರಾಜ್ಯದ ಹಲವೆಡೆ ಇಂಥ ಜಾಲಗಳು ಸಕ್ರಿಯವಾಗಿರುವ ಮಾಹಿತಿ ಇದ್ದು ಈ ಪ್ರಕರಣ ಇದೀಗ ಬೆಟ್ಟಿಂಗ್ ಧಂದೆಯಲ್ಲಿ ಸಕ್ರಿಯವಾಗಿರುವವರಲ್ಲಿ ನಡುಕ ಹುಟ್ಟಿಸಿದೆ.

https://pragati.taskdun.com/yeshwantpur-train-collides-with-derailed-train-more-than-50-dead-more-than-350-injured/

https://pragati.taskdun.com/bjp-leader-shot-dead-in-west-bengal/

https://pragati.taskdun.com/raped-blind-woman-commits-suicide-arrest-of-accused-widespread-public-outcry/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button