ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷದ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಅಭಿಯಾನದ ಪೂರ್ವ ತಯಾರಿಯ ಅಂಗವಾಗಿ ಪ್ರಶಿಕ್ಷಣ ಕಾರ್ಯಕ್ರಮ ಮಂಗಳವಾರ ಕೊಲ್ಲಾಪುರ ವೃತ್ತದ ಗೀತ-ಗಂಗಾ ಕಟ್ಟಡದಲ್ಲಿ ನಡೆಯಿತು.
ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ 42 ಜನರು ಪ್ರಶಿಕ್ಷಣ ಪಡೆದರು. ಸ್ವರ್ಣವಲ್ಲೀ ಮಠದಿಂದ ಪ್ರಶಿಕ್ಷಣ ನೀಡಲು ಗೀತಾ ಜೋಷಿ ಮತ್ತು ಸುಮನಾ ಭಟ್ ಆಗಮಿಸಿದ್ದರು.
‘ಸರಿಯಾದ ಪ್ರಶಿಕ್ಷಣ ಮತ್ತು ವ್ಯಾಪಕ ಪಠಣ ವ್ಯವಸ್ಥೆ ಮಾಡಿದಾಗ ಮಾತ್ರ ಅಭಿಯಾನದ ಉದ್ದೇಶ ಸಫಲವಾಗುತ್ತದೆ. ಹಾಗಾಗಿ ಪ್ರಶಿಕ್ಷಣ ಮಹತ್ವದ ಕೆಲಸ’ ಎಂಬ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಸೂಚನೆಯಂತೆ ಇನ್ನೂ ಹೆಚ್ಚು ಪ್ರಶಿಕ್ಷಣ ಕಾರ್ಯಕ್ರಮ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಭಗವದ್ಗೀತೆ ಅಭಿಯಾನ ಸಮಿತಿಯ ಪ್ರಮುಖರಾದ ವೆಂಕಟ್ರಮಣ ಹೆಗಡೆ, ಪರಮೇಶ್ವರ ಹೆಗಡೆ, ಗಣೇಶ ಹೆಗಡೆ, ಸುಬ್ರಹ್ಮಣ್ಯ ಭಟ್, ಶ್ರೀಪಾದ ಭಟ್, ರಾಮಚಂದ್ರ ಭಟ್, ಶ್ರೀಧರ ಗುಮ್ಮಾನಿ, ಎಂ.ಕೆ.ಹೆಗಡೆ, ಸೀತಾರಾಮ ಭಾಗ್ವತ, ಚಂದ್ರಶೇಖರ ಶಾಸ್ತ್ರಿ, ಸದಾಶಿವ ನಗರ, ಹನುಮಾನ ನಗರ, ಉಷಾ ಕಾಲೋನಿ, ಗುಲ್ ಮೊಹರ್ ಕಾಲೋನಿ, ರಾಮತೀರ್ಥ ನಗರ ಮೊದಲಾದ ಪ್ರದೇಶದ ಭಗಿನಿಯರು, ಸಂತ ಮೀರಾ ಹಾಗೂ ಜಿನಗೌಡ ಶಾಲೆಯ ಶಿಕ್ಷಕಿಯರು ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ