
ಪ್ರಗತಿವಾಹಿನಿ ಸುದ್ದಿ, ನಂಜನಗೂಡು – ಎರಡು ಮಕ್ಕಳ ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನಿಗೆ ಮಹಿಳೆಯ ಪತಿ ಮತ್ತು ಗ್ರಾಮಸ್ಥರು ಸೇರಿ ಥಳಿಸಿದ ಘಟನೆ ನಂಜನಗೂಡು ತಾಲೂಕಿನ ಹಳ್ಳಿದಿಟ್ಟಿಯಲ್ಲಿ ನಡೆದಿದೆ.
ಕೊಂತೆಗಾಲ ಗ್ರಾಮದ ಮಹೇಶ್ ಎಂಬುವವನೆ ಒದೆ ತಿಂದ ಯುವಕ, ಈತ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲೇ ಸಮೀಪದ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರೂ ಯುವತಿಯ ಕುಟುಂಬದವರು ಅದನ್ನು ನಿರಾಕರಿಸಿದ್ದರು.
ಬಳಿಕ ಹಳ್ಳಿದಿಡ್ಡಿ ಗ್ರಾಮದ ಯುವಕನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮಹೇಶ ಯುವತಿ ಮದುವೆ ಆದಮೇಲೂ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಪ್ರಸ್ತುತ ಆಕೆ ಎರಡು ಮಕ್ಕಳ ತಾಯಿಯಾದರೂ ತನ್ನ ಹಳೆಯ ಪ್ರಿಯಕರ ಮಹೇಶನ ಜೊತೆ ಸಂಪರ್ಕದಲ್ಲಿದ್ದಳು.
ಪತಿ ಇಲ್ಲದ ವೇಳೆ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಈ ವಿಚಾರ ಆಕೆಯ ಪತಿಗೆ ತಿಳಿದಿದ್ದು, ಆತ ಗ್ರಾಮದ ಹಿರಿಯರಿಗೆ ತಿಳಿಸಿದ್ದಾನೆ. ಯುಕನಿಗೆ ಬುದ್ದಿ ಕಲಿಸಲು ನಿರ್ಧರಿಸಿದ ಗ್ರಾಮಸ್ಥರು ಪತ್ನಿಯ ಮೂಲಕ ಆ ಯುವಕನನ್ನು ಹಳ್ಳಿದಿಡ್ಡಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಪ್ರೇಯಸಿಯ ಫೋನ್ ಕರೆ ಕೇಳಿ ಆತುರದಿಂದ ಹಳ್ಳಿದಿಡ್ಡಿಗೆ ಬಂದ ಯುವಕನನ್ನು ಹಿಡದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನಿಂದ ಪೋಲಿಸರು ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.
ಒಂದೇ ಮೋಬೈಲ್ ನಂಬರ್‌ನಿಂದ ಆರು ಜನರ ನೋಂದಣಿ