ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿ ಎಫ್ ಸಿನಿಮಾದ ಹಾಡು ಬಳಸಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆದಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಸುಲ್ತಾನಾ ಹಾಡು ಬಳಸಲಾಗಿದ್ದು, ಇದು ಕಾಪಿ ರೈಟ್ಸ್ ಉಲ್ಲಂಘನೆ. ಅನುಮತಿ ಇಲ್ಲದೇ ತಮ್ಮ ಚಿತ್ರದ ಸಂಗೀತ ಬಳಿಸಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಎಂ.ಆರ್.ಟಿ ಸಂಸ್ಥೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಅಲ್ಲದೇ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಉಸ್ತುವಾರಿ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿದ್ದು, ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಆಯಾ ರಾಜ್ಯಗಳ ಕಂಗ್ರೆಸ್ ಮುಖಂಡರು ರಾಜ್ಯಗಳ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಹಿಂದಿಯಲ್ಲಿ ತಯಾರಾದ ಭಾರತ್ ಜೋಡೋ ಯಾತ್ರೆ ವಿಡಿಯೋಗಳಿಗೆ ಕೆಜಿ ಎಫ್ ಸಿನಿಮಾ ಹಾಡನ್ನು ಬಳಸಲಾಗಿದೆ. ಈ ವಿಡಿಯೋ ಕಾಂಗ್ರೆಸ್ ನ ಅಧಿಕೃತ ಟ್ವಿಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಕಾಂಗ್ರೆಸ್ ಪಕ್ಷ ಅನುಮತಿಯಿಲ್ಲದೇ ಕೆಜಿ ಎಫ್ ಸಿನಿಮಾ ಹಾಡನ್ನು ಬಳಸಿದ್ದಕಾಗಿ ಎಂಆರ್ ಟಿ ಸಂಸ್ಥೆ ಪ್ರಕರಣ ದಾಖಲಿಸಿದೆ.
ಬಾರ್ ಮಾಲೀಕರಿಂದ ಹಣ ವಸೂಲಿ: ಮಹಿಳಾ ಸಿಪಿಐ ಅಮಾನತು
https://pragati.taskdun.com/latest/muddebihalacpi-jyoti-metrisuspended/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ