ಪ್ರಗತಿವಾಹಿನಿ ಸುದ್ದಿ; ಶಿರಸಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎಸ್ವಿ ಫಿದಾ ಕರ್ನಾಟಕ ಐಕಾನ್-2021 ಸೌಂದರ್ಯ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಾವನಾ ಭಾಗವತ್ ಮಿಸ್ ಕರ್ನಾಟಕ ಆಗಿ ಹೊರ ಹೊಮ್ಮಿದ್ದಾರೆ.
ಬೆಂಗಳೂರಿನ ಉದ್ಯಮಿ, ದಿಶಾ ಎಂಟರ್‌ಪ್ರೈಸಸ್ ಮಾಲೀಕ ಮೂಲತಃ ಕುಮಟಾ ತಾಲೂಕಿನ ಕಡೆಕೋಡಿಯ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ ಅವರ ಪ್ರಥಮ ಪುತ್ರಿ ಭಾವನಾ ನಟನೆ, ಬುದ್ದಿವಂತಿಕೆ, ಸೌಂದರ್ಯ ಸೇರಿದಂತೆ ಹಲವು ವಿಭಾಗದಲ್ಲಿ ಗೆಲುವು ಸಾಧಿಸಿ ಈಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಾಡಿನ ವಿವಿಧಡೆಯಿಂದ ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ರೋಮಿಯೋ ಜ್ಯುಲಿಯಟ್ ಸಿನೇಮಾದಲ್ಲಿ ಬಾಲ ನಟಿಯಾಗಿಯೂ ಪಾತ್ರ ಮಾಡಿದ್ದ ಪ್ರತಿಭಾನ್ವಿತೆ ಭಾವನಾಗೆ ಈಗ ಕನ್ನಡ ಹಾಗೂ ತೆಲಗು ಸಿನೆಮಾದಲ್ಲಿಯೂ ನಟನೆ ಈಗ ಅವಕಾಶ ಹುಡುಕಿಕೊಂಡು ಬರುತ್ತಿದೆ. ಭರತನಾಟ್ಯ, ವೆಸ್ಟರ್ನ ಡಾನ್ಸ, ಶಾಸ್ತ್ರೀಯ ಸಂಗೀತ ಕಲಾವಿದೆಯೂ ಆಗಿರುವ ಬಹುಮುಖ ಪ್ರತಿಭೆಯ ಭಾವನಾ ಈಗಾಗಲೇ ವಿವಿಧ ಉತ್ಪನ್ನಗಳಿಗೆ ರೂಪದರ್ಶಿಯಾಗಿಯೂ ಆಗಿದ್ದಾಳೆ. ಕನ್ನಡ ಸೇರಿದಂತೆ ವಿವಿಧ ಟಿವಿ, ರೆಡಿಯೋ ಶೋಗಳಲ್ಲೂ ಪಾಲ್ಗೊಂಡಿದ್ದಾಳೆ. ನಟನೆಯಲ್ಲಿ ಡಿಪ್ಲೋಮಾ, ಬಿಬಿಎಂ ಪದವಿ ಕೂಡ ಪಡೆದಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ತಂದೆಯ ಜೊತೆಗೆ ಉದ್ಯಮದಲ್ಲಿ ಸಹಭಾಗಿಯೂ ಆಗಿದ್ದಾರೆ ಎಂಬುದು ಉಲ್ಲೇಖನೀಯ. ಮಿಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಭಾವನಾ ಭಾಗವತ್ ಸಾಧನೆಗೆ ರಾಗಿಣಿ ಪ್ರತಿಷ್ಠಾನದ ಮುಖ್ಯಸ್ಥ ಪ್ರಕಾಶ ಹೆಗಡೆ ಯಡಹಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ