ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಿಂದ ಬೆಳಗುಂದಿ ಗ್ರಾಮದವರೆಗಿನ ಸುಸಜ್ಜಿತ ರಸ್ತೆಯ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2 ಕೋಟಿ ರೂ.ಗಳನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಂಜೂರು ಮಾಡಿಸಿದ್ದು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಹಾಗೂ ಆಯಾ ಗ್ರಾಮಗಳ ಪ್ರತಿನಿಧಿಗಳು ಸೇರಿ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ಕೈಗೊಂಡು ಅಧಿಕೃತ ಚಾಲನೆ ನೀಡಿದರು.
ಈ ರಸ್ತೆಯ ನಿರ್ಮಾಣದಿಂದ ಬೆನಕನಹಳ್ಳಿ, ರಾಕಸಕೊಪ್ಪ, ಬೆಳಗುಂದಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕಾರಿಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮೂಲಸೌಕರ್ಯಗಳಿಗೆ ಆದ್ಯತೆ ನೀಡಿದ್ದು ರಸ್ತೆಗಳ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಿ ಜನರಿಗೆ ಸುದೀರ್ಘ ಕಾಲ ಯಾವುದೇ ಅಡಚಣೆಗಳಿಲ್ಲದಂತೆ ಬಳಕೆ ಮಾಡಲು ಅನುವು ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಮಾತನಾಡಿ, ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.
ಕಾಮಗಾರಿಗಳ ಭೂಮಿಪೂಜೆ ಸಮಾರಂಭದಲ್ಲಿ ಬೆನಕನಹಳ್ಳಿಯ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಮಹೇಶ ಕೋಲಕಾರ, ಬಾಳು ದೇಸೂರಕರ, ಕಲ್ಲಪ್ಪ ದೇಸೂರಕರ, ಮೀನಾಕ್ಷಿ ಪಾಟೀಲ, ಕಲಾವತಿ ದೇಸೂರಕರ, ಶಿಲ್ಪಾ ಮುಂಗಳಿಕರ, ಮಲ್ಲೇಶ ಕುರಂಗಿ, ಜ್ಯೋತಿಬಾ ದೇಸೂರಕರ, ಕಲ್ಲಪ್ಪ ಪಾಟೀಲ, ಮೊನಪ್ಪ ಪಾಟೀಲ, ಪ್ರೇಮಾ ಹಿರೋಜಿ, ಮೋಹನ ಸಾಂಬ್ರೆಕರ, ಜ್ಯೋತಿಬಾ ಪಿಸಾಳೆ, ಬಾಬು ಕೋಲಕಾರ, ರಾಜು ದನಗಲ್ಕರ, ಲಕ್ಷ್ಮೀ ಸುತಾರ, ಶಂಕರ ಪಾಟೀಲ, ನಾರಾಯಣ ಮುತಗೇಕರ್, ಸಾಗರ ಇಲಾಖೆ, ಸುಭಾಷ ನಾಯ್ಕ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಆಪ್ತ ಸಹಾಯಕರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಘೋರ ಘಟನೆ: ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ