Latest

ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋಗಿ ದುರಂತ ಅಂತ್ಯಕಂಡ ಯುವಕರು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದ ನಾಲ್ವರು ಸ್ನೇಹಿತರು ಗೋದಾವರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು 19 ವರ್ಷದ ರಾಯಪುರ ಪ್ರಕಾಶ, ಕಾರ್ತಿಕ, ಕೆ.ಅನ್ವೇಶ, ಎಸ್ ಶ್ರೀಕಾಂತ್(20) ಎಂದು ಗುರುತಿಸಲಾಗಿದೆ. ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆಂದು 16 ಯುವಕರು ವೆಂಕಟಾಪುರಂ ಗ್ರಾಮದ ರಂಗರಜಪುರಂ ಬಳಿ ಗೋದಾವರಿ ನದಿ ಬಳಿ ತೆರಳಿದ್ದರು. ಈಜಲು ಬಾರದಿದ್ದರೂ ನಾಲ್ವರು ಯುವಕರು ನದಿಗಿಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Home add -Advt

ನಾಲ್ವರು ಯುವಕರ ಮೃತದೇಹವನ್ನು ಹೊರತೆಗೆಯಲಾಗಿದ್ದು, ನದಿಯಲ್ಲಿ ಮರಳು ತೆಗೆಯಲೇಂದು ತೊಡಿದ್ದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button