Latest

ಮಹಿಳೆಯ ಮೇಲೆ ದೌರ್ಜನ್ಯ; ಸೇಡಂ ಬಿಜೆಪಿ ಶಾಸಕರ ವಿರುದ್ಧ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಯೋರ್ವರು ಸೇಡಂ ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್ ವಿರುದ್ಧ ದೌರ್ಜನ್ಯ, ಅನ್ಯಾಯವೆಸಗಿರುವ ಆರೋಪ ಮಾಡಿದ್ದು, ಫೇಸ್ ಬುಕ್ ಲೈವ್ ಗೆ ಬಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ವಕೀಲ ಜಗದೀಶ್ ಜತೆ ಫೇಸ್ ಬುಕ್ ಲೈವ್ ಗೆ ಬಂದ ಮಹಿಳೆ, ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ನನಗೆ ಅನ್ಯಾಯ ಮಾಡಿದ್ದಾರೆ. ಅವರಿಂದ ನನಗೆ ಮಗು ಕೂಡ ಆಗಿದೆ. ಕಳೆದ 8 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ನನ್ನ ಮಗನಿಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಆದರೂ ಶಾಸಕರು ನ್ಯಾಯಕೊಡಿಸಿಲ್ಲ ಎಂದಿದ್ದಾಳೆ.

Home add -Advt

ಅಲ್ಲದೇ ನಿನ್ನೆ ವಿಧಾನಸೌಧ ಠಾಣೆ ಪೊಲೀಸರು ನನ್ನನ್ನು ಠಾಣೆಗೆ ಕರೆತಂದು ಇಡಿ ದಿನಕೂರಿಸಿಕೊಂಡಿದ್ದಾರೆ. ಯಾಕೆ ಈರೀತಿ ಮಾಡುತ್ತಿದ್ದೀರಿ ಎಂದರೆ ಮೇಲಿನ ಅಧಿಕಾರಿಗಳಿಂದ ಒತ್ತಡವಿದೆ. ಮೊದಲು ಶಾಸಕರ ವಿರುದ್ಧದ ತನ್ನ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬರೆದುಕೊಡುವಂತೆ ಬೆದರಿಕೆಯೊಡ್ದಿ ಕೂಡಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಪುತ್ಥಳಿ ಕಳ್ಳತನ

Related Articles

Back to top button