Latest

ಟಿಎಂಸಿ ಸೇರ್ಪಡೆಯಾಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಬಿಜೆಪಿ ಸಂಸದ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕಿಯ ವಿದ್ಯಮಾನಗಳು ಗರಿ ಗೆದರಿದ್ದು, ಬಿಜೆಪಿ ಸಂಸದ ಸೌಮಿತ್ರ ಖಾನ್ ಪತ್ನಿ, ಸುಜಾತಾ ಮೊಂಡಲ್ ಖಾನ್ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿ ಸಂಸದ ಹಾಗೂ ಪತ್ನಿ ನಡುವಿನ ದಾಂಪತ್ಯ ಕಲಹಕ್ಕೆ ಕಾರಣವಾಗಿದೆ.

ಬಿಶನ್ ಪುರ ಲೋಕಸಭಾ ಸಂಸದ ಸೌಮಿತ್ರಖಾನ್ ಪತ್ನಿ ಸುಜಾತಾ ಮೊಂಡಲ್ ಇಂದು ಟಿಎಂಸಿ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಸುಜಾತಾ ಪತಿ, ಬಿಜೆಪಿ ಸಂಸದ ಸೌಮಿತ್ರ, ಸುಜಾತಾ ನಿರ್ಧಾರದಿಂದ ನಮ್ಮ 10 ವರ್ಷಗಳ ಸಂಬಂಧ ಮುರಿದುಬಿದ್ದಿದೆ. ನನ್ನ ಮಾತು ಮೀರಿ ಆಕೆ ಟಿಎಂಸಿ ಸೇರ್ಪಡೆಯಾಗಿದ್ದಾಳೆ. ಹೀಗಾಗಿ ವಿಚ್ಛೇದನ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಟಿಎಂಸಿ ಸೇರ್ಪಡೆಯಾಗಿರುವ ಸುಜಾತಾ, ಬಿಜೆಪಿಗಾಗಿ ಹಾಗೂ ಪತಿ ಸೌಮಿತ್ರ ಗೆಲುವ್ಗಾಗಿ ನಾನು ಸಾಕಷ್ಟು ದುಡಿದಿದ್ದೇನೆ. ಆದರೆ ನನಗೆ ಪಕ್ಷದಲ್ಲಾಗಲಿ, ಮನೆಯಲ್ಲಾಗಲಿ ಗೌರವ ಸಿಗಲಿಲ್ಲ. ಹಾಗಾಗಿ ಟಿಎಂಸಿ ಸೇರ್ಪಡೆಯಾಗಿದ್ದೇನೆ ಎಂದಿದ್ದಾರೆ.

Home add -Advt

Related Articles

Back to top button