Kannada NewsKarnataka News

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ನಾಳೆ ಬೆಳಗಾವಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ನೂತನ ರಾಜ್ಯಾಧಕ್ಷ ನಳೀನ ಕುಮಾರ ಕಟೀಲ್ ನಾಳೆ ಅ.2 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಟಿಳಕವಾಡಿಯ ವೀರಸೌಧದಲ್ಲಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಲಿದ್ದಾರೆ.

ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗಾಂಧೀ ಜಯಂತಿಯಿಂದ ಸರ್ದಾರ ವಲ್ಲಭಾಯಿ ಪಟೇಲ ಅವರ ಜನ್ಮದಿನವಾದ ಅ.30 ರವರೆಗೆ ಬಿಜೆಪಿಯ ಪ್ರತಿ ಸಂಸದರು 150 ಕಿಮೀ ಪಾದಯಾತ್ರೆ ಮಾಡುವ ಮೂಲಕ ಜನಜಾಗೃತಿ ಮಾಡುವರು.

Home add -Advt

ಜಲ ಸಂರಕ್ಷಣೆ, ಸ್ವಚ್ಚ ಭಾರತ, ದುಶ್ಚಟ ಮುಕ್ತ ಸಮಾಜ, ಪ್ಲಾಸ್ಟಿಕ ಮುಕ್ತ ಪರಿಸರ, ಖಾದಿ ವಸ್ತುಗಳ ಬಳಕೆ ಕುರಿತು ವಿಶೇಷ ಮಹತ್ವ ನೀಡಲಾಗುವುದು ಎಂದು ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಮತ್ತು ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ತಿಳಿಸಿದ್ದಾರೆ.

ನಾಳೆ ಕಟೀಲು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಗಾವಿ ನಗರದಲ್ಲಿ ಪಾದಯಾತ್ರೆ  ನಡೆಸುವರು. ಬೆಳಗಾವಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ ಅವರು ಪಾದಯಾತ್ರೆ ನಡೆಸಲಿದ್ದಾರೆ.

Related Articles

Back to top button