Latest

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಆಸ್ಪತ್ರೆಯಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

21 ವರ್ಷದ ನಟಿ ಚೇತನಾ ರಾಜ್ ಬೆಂಗಳೂರಿನ ನವರಂಗ್ ಸರ್ಕಲ್ ನ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದೆ. ವೈದ್ಯರ ನಿರ್ಲಕ್ಷದಿಂದಲೇ ಚೇತನಾ ಮೃತಪಟ್ಟಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆಗಳೂ ಇಲ್ಲ, ಪೋಷಕರ ಒಪ್ಪಿಗೆ ಇಲ್ಲದೇ ಫ್ಯಾಟ್ ಸರ್ಜಿರಿ ನಡೆಸಲಾಗಿದೆ ಎಂದು ಚೇತನಾ ತಂದೆ ವರದರಾಜ್ ಆರೋಪಿಸಿದ್ದಾರೆ.

ಚೇತನಾರಾಜ್ ಕಲರ್ಸ್ ಕನ್ನಡದಲ್ಲಿನ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಭಾರಿ ಮಳೆ ಮುನ್ಸೂಚನೆ; ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ

Related Articles

Back to top button