ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಶುಕ್ರವಾರ ನಗರದ ಎಚ್.ಎನ್.ಸೋನವಾಲ್ಕರ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವೈದ್ಯ ಡಾ.ಗಿರೀಶ್ ಸೋನವಾಲಕರ ಅವರ ಜನ್ಮದಿನದ ಪ್ರಯುಕ್ತ ಡಾ.ಕೆ.ಎಚ್. ಸೋನವಾಲಕರ ಪ್ರತಿಷ್ಠಾನದಿಂದ ರಕ್ತದಾನ ಶಿಬಿರ, ಮೆಗಾ ವ್ಯಾಕ್ಸಿನೇಷನ್ ಅಭಿಯಾನ, ವೈದ್ಯಕೀಯ ತಪಾಸಣೆ ಹಾಗೂ ಅನಿಮಿಯ ಮುಕ್ತ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ ಹಾಗೂ ನಗರ ಸೇವಕ ರಾಜಶೇಖರ ಡೋಣಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ , ಬೆಳಗಾವಿಯಲ್ಲಿ ಕೋವಿಡ್ ಹೆಚ್ಚಾದ ಬಳಿಕ ಗಿರೀಶ ಸೋನವಾಲಕರ ಅವರು ಬೆಳಗಾವಿ ಜನರ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಉತ್ತಮ ಸ್ಪಂದನೆ ಮಾಡಿದ್ದಾರೆ. ಕೋವಿಡ್ ಅಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಅವರು ಎಲ್ಲರಿಗಿಂತ ಮುಂದೆ ಬಂದು ಜನರ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.
ಸಂಸದೆ ಮಂಗಳಾ ಅಂಗಡಿ, ಇಂದು ಪ್ರಧಾನಿ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಜಿಲ್ಲೆಯ ಮೂರು ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಗಿರೀಶ ಸೊನವಾಲಕರ ಅವರು ಕೋವಿಡ್ ಸಂದರ್ಭದಲ್ಲಿ ಮಾಡಿದ ಕಾರ್ಯ ಸ್ಮರಣೀಯ ಎಂದು ತಿಳಿಸಿದರು.
ಡಾ. ಗಿರೀಶ ಸೋನವಾಲಕರ್ ಅವರು ಮಾತನಾಡಿದರು. ಎಸಿಪಿ ನಾರಾಯಣ ಬರಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂಜುಂಡಪ್ಪ ವರದಿಗೆ ಹೊಸ ರೂಪ – ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ