Belagavi NewsBelgaum NewsKannada NewsKarnataka NewsLatestPolitics

*ವಿಮಾನ ನಿಲ್ದಾಣಗಳಿಗೆ ರಾಯಣ್ಣ, ಚನ್ನಮ್ಮ ಹೆಸರಿಡಲು ಪರಿಶೀಲನೆ; ಸರ್ಕಾರ ಭರವಸೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿಧಾನಸಭೆಗೆ ತಿಳಿಸಿದರು.

ಸದಸ್ಯರುಗಳಾದ ಎನ್.ಹೆಚ್.ಕೋನರೆಡ್ಡಿ, ಶ್ರೀನಿವಾಸ್ ಮಾನೆ, ಅರವಿಂದ್ ಬೆಲ್ಲದ್ ಅವರ ಪ್ರಸ್ತಾವನೆಗೆ ಸಚಿವರು ಉತ್ತರಿಸಿದರು. ಈ ಕುರಿತಂತೆಸದನ ಸರ್ವಾನುಮತದ ನಿರ್ಣಯ ಅಂಗೀಕರಿಸಬೇಕು ಎನ್ನುವ ಕೋನರೆಡ್ಡಿ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು ನಿರ್ಣಯ ಅಂಗೀಕರಿಸುವುದು ಸದನದ ವಿವೇಚನೆಗೆ ಬಿಟ್ಟ ವಿಷಯ ಎಂದು ತಿಳಿಸಿದರು.

Home add -Advt

ಸರ್ಕಾರ ಈ ಕುರಿತು ನಾಳೆಯೇ ನಿರ್ಣಯ ಮಂಡಿಸಲಿ ನಾವೆಲ್ಲರೂ ಅದಕ್ಕೆ ಬೆಂಬಲಿಸುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Related Articles

Back to top button