Latest

ರಸ್ತೆ ಬದಿ ಟೇಲರಿಂಗ್ ಶಾಪಿಟ್ಟ ಬಾಲಿವುಡ್ ನಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್, ಸಂಕಷ್ಟದಲ್ಲಿದ್ದ ಅನೇಕರಿಗೆ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸೋನು ಸೂದ್ ಟೆಲರಿಂಗ್ ಮಾಡುತ್ತಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸೋನು ಸೂದ್ ತಮ್ಮ ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಸ್ವತ: ತಾವೇ ರಸ್ತೆ ಬದಿಯಲ್ಲಿ ಕುಳಿತು ಟೇಲರಿಂಗ್ ಮಾಡುತ್ತಿದ್ದಾರೆ.ಈ ಬಗ್ಗೆ ಬರೆದುಕೊಂಡಿರುವ ಸೋನು ಸೂದ್, ಇದು ಸೋನು ಸೂದ್ ಟೇಲರಿಂಗ್ ಶಾಪ್. ಇಲ್ಲಿ ಉಚಿತವಾಗಿ ಬಟ್ಟೆ ಹೊಲಿದುಕೊಡಲಾಗುತ್ತದೆ. ಆದರೆ ಪ್ಯಾಂಟ್ ಬದಲಿಗೆ ಚಡ್ಡಿಯಾದರೆ ನಮ್ಮ ಗ್ಯಾರಂಟಿ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ ಸೋನು ಸೂದ್ ಟೆಲರಿಂಗ್ ಮಾಡುತ್ತಿರುವ ವಿಡಿಯೋ ಗಮನಸೆಳೆದಿದ್ದು, ಇದು ಸಿನಿಮಾಗಾಗಿ ಮಾಡಿರುವ ದೃಶ್ಯವೋ ಅಥವಾ ಬೇರಾವ ಕಾರಣಕ್ಕೋ ಎಂಬುದು ತಿಳಿದುಬಂದಿಲ್ಲ.

Home add -Advt

Related Articles

Back to top button