
ಪ್ರಗತಿವಾಹಿನಿ ಸುದ್ದಿ; ಸಿರಿಯಾ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, 28 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಸಿರಿಯಾದಲ್ಲಿ ನಡೆದಿದೆ.
ರಜೆ ಮುಗಿಸಿ ಸೈನಿಕರು ತಮ್ಮ ನೆಲೆಗಳಿಗೆ ಮರಳುತ್ತಿದ್ದಾಗ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮರಭೂಮಿ ಪ್ರದೇಶದ ಗುಹೆಗಳಲ್ಲಿ ಅಡಗಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯಲ್ಲಿ ಸೈನಿಕರು ಸೇರಿದಂತೆ ಹಲವರು ಸಾವನಪ್ಪಿದ್ದಾರೆ.