
ಪ್ರಗತಿವಾಹಿನಿ ಸುದ್ದಿ: ಬಸವ ಮಂಟಪ ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕೊಚ್ಚಿ ಏರ್ ಪೋರ್ಟ್ ನಲ್ಲಿ ಭದ್ರತಾ ಸಿಬ್ಬಂದಿ ರವಿ ಹಂಜ್ ಅವರನ್ನು ವಶಕ್ಕೆ ಪಡೆದಿದ್ದಾರೆ. ರವಿ ಹಂಜ್ ಕೇರಳದ ಕೊಚ್ಚಿ ಏರ್ ಪೋರ್ಟ್ ಮೂಲಕ ವಿದೇಶಕ್ಕೆ ತೆರಳಲು ಮುಂದಾಗಿದ್ದರು.
ಈ ವೇಳೆ ಅವರನ್ನು ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸವಣ್ಣನವರಿಗೆ ಅವಮಾನ ವಿವಾದ ಸಂಬಂಧ ಬೆಳಗಾವಿಯಲ್ಲಿಯೂ ರವಿ ಹಂಜ್ ವಿರುದ್ಧ ಒಂದು ಪ್ರಕರಣ ದಾಖಲಾಗಿತ್ತು.
ವಶಕ್ಕೆ ಪಡೆದ ರವಿ ಹಂಜ್ ಅವರನ್ನು ಬೆಳಗಾವಿ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ. ಕೊಚ್ಚಿಯಿಂದ ರವಿ ಹಂಜ್ ಅವರನ್ನು ಬೆಳಗಾವಿಗೆ ಪೊಲೀಸರು ಕರೆ ತರಲಿದ್ದಾರೆ.



