Kannada NewsKarnataka News

*ತಂಗಿಯ ಮದುವೆ ಸಾಲ ತೀರಿಸಲು  ಕಳ್ಳತನಕ್ಕಿಳಿದ ಅಣ್ಣ*

ಪ್ರಗತಿವಾಹಿನಿ ಸುದ್ದಿ: ತಂಗಿಯ ಮದುವೆ ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಅಣ್ಣ ಪೊಲೀಸರ ಅತಿಥಿಯಾಗಿದ್ದಾನೆ. ಮದ್ದೂರು ಮೂಲದ ಸಂಜೀವ್ ಕುಮಾರ್ ಬಂಧಿತ ಆರೋಪಿ.

ಆರೋಪಿ ವೃದ್ಧೆಯರು ಸೇರಿದಂತೆ ನಗರದಲ್ಲಿ ಹಲವರ ಸರ ಎಗರಿಸುತ್ತಿದ್ದ ಕೆಂಗೇರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ಕೆಲವು ವರ್ಷಗಳ ಹಿಂದೆ ತಂಗಿಯ ಮದುವೆ ಮಾಡಿದ್ದ. ಇದಕ್ಕಾಗಿ ಸಾಲ ಮಾಡಿದ್ದ. ಸಾಲ ತೀರಿಸಲಾಗದೆ ಹೆಂಡತಿಯೊಂದಿಗೆ ಬೆಂಗಳೂರಿಗೆ ಬಂದು ಕೆಂಗೇರಿಯ ಕೋಡಿಪಾಳ್ಯದಲ್ಲಿ ವಾಸವಾಗಿದ್ದ.

Home add -Advt

ಫುಡ್ ಡೆಲಿವರಿ ಕೆಲಸದ ಜೊತೆಗೆ ಅವಕಾಶ ಸಿಕ್ಕಾಗ ಸರಗಳ್ಳತನ ಮಾಡುತ್ತಿದ್ದ. ಕೆಂಗೇರಿ, ಕುಂಬಳಗೋಡು, ಆರ್ ಆರ್ ನಗರ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡುತ್ತಿದ್ದ. ಸಿಸಿಟಿವಿ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 7 ಲಕ್ಷ ಮೌಲ್ಯದ 105 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡು ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button