Belagavi NewsBelgaum NewsKarnataka News
*ಬೆಳಗಾವಿಯಲ್ಲಿ ಅಪಾರ್ಟ್ಮೆಂಟ್ ಗೆ ನುಗ್ಗಿ ಮಹಿಳೆ ಕೊಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪಾರ್ಟ್ಮೆಂಟ್ ಗೆ ನುಗ್ಗಿ ಮಹಿಳೆ ಮಂಗಳಸೂತ್ರ ಕಿತ್ತುಕೊಂಡು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಗಣೇಶಪುರದ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಲಕ್ಷ್ಮೀ ನಗರದ ನಿವಾಸಿ ಅಂಜನಾ ಅಜೀತ ದಢೀಕರ್(49) ಕೊಲೆಯಾದ ಮಹಿಳೆ. ಅಪಾರ್ಟೆಂಟ್ ನಲ್ಲಿ ಗಂಡ-ಹೆಂಡತಿ ಮಾತ್ರ ವಾಸ ಮಾಡುತ್ತಿದ್ದರು. ಆಟೋ ಚಾಲಕನಾಗಿದ್ದ ಮಾಡಿ ಜೀವನ ಸಾಗಿಸುತ್ತಿದ್ದ ಅಜೀತ್ ದಢೀಕರ್ ನಿನ್ನೆ ಸಂಜೆ ಮನೆಗೆ ವಾಪಸ್ ಬಂದಾಗ ಕೊಲೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾರನ್ನ ಬೆಳಗಾವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರಳಲ್ಲಿದ್ದ ಮಂಗಳಸೂತ್ರ, ಕಿವಿಯೊಲೆ, ಕೈಯಲ್ಲಿದ್ದ ಬಂಗಾರ ಉಂಗುರ ಕದ್ದು ಕೊಲೆ ಮಾಡಿರುವ ಶಂಕೆಯಿದೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




