Belagavi NewsBelgaum NewsKannada NewsKarnataka News

*ಅನಧಿಕೃತ ಬಡಾವಣೆ ನಿರ್ಮಿಸಿದವರಿಗೆ ಶಾಕ್ ನೀಡಿದ ಬುಡಾ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಬೆಳಗಾವಿ ನಗರದಲ್ಲಿ ಅನಧಿಕೃತ ಬಡಾವಣೆಗೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜಾರೋಷವಾಗಿ ನಗರದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿದ್ದವರಿಗೆ ಬುಡಾ ಅಧಿಕಾರಿಗಳು ಶಾಕ್ ನೀಡಿದ್ದಾರೆ.‌

ನಾಲಾ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿವೇಶನಗಳ ವಿನ್ಯಾಸಗೊಳಿಸಿದ ಬಡವಾಣೆಗಳನ್ನು ಬುಡಾ ಅಧಿಕಾರಿಗಳು ತೇರವುಗೊಳಿಸಿದ್ದಾರೆ.

ಬೆಳಗಾವಿ ನಗಾರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಕೀಲ ಅಹ್ಮದ ಮಾರ್ಗದರ್ಶನದಲ್ಲಿ ಪೊಲೀಸ್‌ ಸಿಬ್ಬಂದಿಗಳೊಂದಿಗೆ ಪ್ರಾಧಿಕಾರದ ಅಂಭಿಯಂತರರು, ಸಹಾಯಕ ಅಭಿಯಂತರರು, ಸಹಾಯಕರು ಸೇರಿಕೊಂಡು ಬೆಳಗಾವಿ ಮಹಾನಗರದ ಹೊರವಲಯದ ಪೀರನವಾಡಿ ಗ್ರಾಮದ ಸರ್ವೆ ನಂಬ‌ರ್ 113 ಮತ್ತು 115 ರ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ ವಿನ್ಯಾಸವನ್ನು ಹಾಗೂ ಅತಿಕ್ರಮಣವನ್ನು ತೆರವುಗೊಳಿಸಿ ಬೆಳಗಾವಿ ನಗರದಲ್ಲಿ ಅನಧಿಕೃತ ಬಡಾವಣೆ, ನಿವೇಶನಗಳ ನಿರ್ಮಾಣಕೋರರಿಗೆ ಬೀಸಿ ಮುಟ್ಟಿಸಿದ್ದಾರೆ.

ಜೆಸಿಬಿ ವಾಹನದ ಮೂಲಕ ಅನಧಿಕೃತ ನಿವೇಶನಗಳ ತೆರವುಗೊಳಿಸಿ ಅಲ್ಲಿ ಇದ್ದ ವಸ್ತುಗಳನ್ನು ಖಾಲಿ ಮಾಡಿಸಲಾಗಿದೆ. 

Home add -Advt

Related Articles

Back to top button