ಕೇಂದ್ರ ಸರ್ಕಾರದ ಸಾಧನೆಗೆ ರಾಷ್ಟ್ರಪತಿ ಫುಲ್ ಮಾರ್ಕ್ಸ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

2020 ಕೇಂದ್ರ ಬಜೆಟ್​ ಮೇಲಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್, ರಾಷ್ಟ್ರದ ಜನತೆಗೆ ಹಾಗೂ ಸಂಸತ್ ಸದಾಸ್ಯರಿಗೆ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿದರು. ಭಾರತದ ಸಂವಿಧಾನ ಎಲ್ಲರಿಗೂ ಮಾರ್ಗದರ್ಶಕ. ಹೀಗಾಗಿ ಎಲ್ಲರೂ ಸಂವಿಧಾನಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ. ನ.26ಕ್ಕೆ ಸಂವಿಧಾನ ರಚನೆಯಾಗಿ 70 ವರ್ಷ. ಈ ದಶಕದಲ್ಲಿ ಭಾರತ ಸದೃಢವಾಗಲಿ ಎಂದು ಹಾರೈಸಿದರು.

Home add -Advt

ಕಳೆದ ವರ್ಷದ ಹಲವಾರು ಮಹತ್ವದ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ. ಮುಸ್ಲೀಂ ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಖ್ ನಿಷೇಧ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, ಎನ್ ಆರ್ ಸಿ ಜಾರಿ, ಚಿಟ್ ಫಂಡ್ ವಂಚನೆ ತಪ್ಪಿಸಲು ಕಾಯ್ದೆ ಸೇರಿದಂತೆ ಹಲವಾರು ಐತಿಹಾಸಿಕ ಕಾನೂನು ಗಳನ್ನು ಜಾರಿಗೆ ತರುವ ಮೂಲಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ನವಭಾರತ ನಿರ್ಮಾಣಕ್ಕೆ ಜನಾದೇಶ ಸಿಕ್ಕಿದೆ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಯಾಗಿದೆ. ಹಲವು ಕ್ಷೇತ್ರಗಳಲ್ಲಿ ಸುಧಾರಣೆಯಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಶ್ರೇಯಾಂಕ ವೃದ್ಧಿಯಾಗಿದೆ. ಕಳೆದ 6 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದ್ದೇವೆ. 5 ಕೋಟಿ ಜನರಿಗೆ ಆರೋಗ್ಯ ವಿಮೆ ಜಾರಿಯಾಗಿದೆ ಎಂದು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಜಮ್ಮುಕಾಶ್ಮೀರ ವಿಕಾಸಕ್ಕೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಣಿವೆ ರಾಜ್ಯದ ಜನತೆಗೆ ಸಮಾನ ಅಧಿಕಾರ ನೀಡಲಾಗುವುದು, ಅಭಿವೃದ್ಧಿ ಪರ್ವ ಆರಂಭವಾಗುವುದು. ಸಬ್ ಕಾ ಸಾತ್ ಮಂತ್ರದಂತೆ ಎಲ್ಲರ ಅಭಿವೃದ್ಧಿಯಾಗಲಿದೆ. ಕಾಶ್ಮೀರದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಳಿಸಿದ ಅವರು ಕಣಿವೆ ರಾಜ್ಯದ 370ನೇ ವಿಧಿ ರದ್ಧತಿ ಐತಿಹಾಸಿಕ ಕ್ರಮ ಎಂದು ಶ್ಲಾಘಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದೇವೆ. ಈ ಮೂಲಕ ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡಿದ್ದೇವೆ. ದೇಶದಲ್ಲಿ ಯಾವುದೇ ಪ್ರತಿಭಟನೆಯ ವೇಳೆಯೂ ಹಿಂಸಾಚಾರ ಸರಿಯಲ್ಲ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

Related Articles

Back to top button