
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಆರ್.ಪಾಟೀಲ ನಿಧನರಾಗಿದ್ದಾರೆ.
ಸ್ಟೇಟ್ ಬಾರ್ ಅಸೋಸಿಯೇಷನ್ ಸದಸ್ಯರೂ ಆಗಿದ್ದ ಅವರು ಧಾರವಾಡದ ಹೈಕೋರ್ಟ್ ಬೆಂಚ್ ಸ್ಥಾಪನೆಯಾಗಲು ಪ್ರಮುಖ ಪಾತ್ರ ವಹಿಸಿದ್ದರು.
ಸದಾ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅವರು, ನಿರಂತರ ಹೋರಾಟದ ಮೂಲಕ ಹೈಕೋರ್ಟ್ ಪೀಠ ಸ್ಥಾಪನೆಗೆ ಅವರು ಕಾರಣರಾಗಿದ್ದರು.


