Karnataka NewsLatestPolitics

*ಮಾಜಿ ಸಚಿವ ಸಿ.ವೀರಣ್ಣ ಅಗಲಿಕೆಗೆ ಡಿಸಿಎಂ ಪರಮೇಶ್ವರ್ ಕಂಬನಿ*

ಪ್ರಗತಿವಾಹಿನಿ ಸುದ್ದಿ: ಮಾಜಿ‌ ಸಚಿವರು, ಮಾಜಿ ಉಪಸಭಾಪತಿಗಳು ಹಾಗೂ ಆತ್ಮೀಯರು ಆಗಿದ್ದ ಸಿ.ವೀರಣ್ಣನವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ರಾಜ್ಯದ ಹಾಗೂ ಶೋಷಿತ ಜನರ ಬಗ್ಗೆ ಸದಾಕಾಲ ಒಳಿತನ್ನೇ ಬಯಸುತ್ತಿದ್ದ ಅವರ ನಿಧನವು ವೈಯಕ್ತಿಕವಾಗಿ ನನಗೆ ಅಪಾರ ನೋವುಂಟುಮಾಡಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಸಮರ್ಥವಾಗಿ ಅವುಗಳನ್ನು ಮುನ್ನಡೆಸಿದವರು. ವೀರಣ್ಣ ಅವರ ಅಗಲಿಕೆಯಿಂದ ಹಳೆಯ ತಲೆಮಾರಿನ ರಾಜಕೀಯ ಕೊಂಡಿಯೊಂದು ಕಳಚಿದೆ.

Home add -Advt

ವೀರಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ, ಇನ್ನಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ತಮ್ಮ ಹೋರಾಟದ ಬದುಕು, ತಳ ಸಮುದಾಯಗಳ ಬಗೆಗಿನ ಕಾಳಜಿ ಮತ್ತು ಸಾಧನೆಗಳ ಮೂಲಕ ನಮ್ಮ ನಡುವೆ ಅವರ ನೆನಪು ಚಿರಸ್ಥಾಯಿ.

ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.


Related Articles

Back to top button