Kannada NewsKarnataka NewsLatest

*ಆಚಾರ್ಯ ವಿದ್ಯಾಸಾಗರ ಶ್ರೀ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ದುರಂತ; ಅಪಘಾತದಲ್ಲಿ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸಲ್ಲೇಖನ ವೃತದ ಮೂಲಕ ದೇಹತ್ಯಾಗ ಮಾಡಿದ್ದ ಜೈನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಕಾರೊಂದು ಕಾಲುವೆಗೆ ಬಿದ್ದು ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Home add -Advt

ಮಹಾರಾಷ್ಟ್ರದ ಗೊಂಡಿಯಾದ ಅಂಗಾಂವ್ ಹಾಗೂ ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾರಿನಲ್ಲಿ 6 ಜನರು ಪ್ರಯಾಣಿಸುತ್ತಿದ್ದರು.

ಆಚಾರ್ಯಾ ವಿದ್ಯಾಸಾಗರ ಮಹಾರಾಜ್ ಅವರ ಅಂತಿಮ ದರ್ಶನಕ್ಕೆಂದು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Related Articles

Back to top button