GIT add 2024-1
Laxmi Tai add
Beereshwara 33

ಜಾತಿ ಗಣತಿ ವರದಿ ಅವೈಜ್ಞಾನಿಕ : ಡಾ.ಪ್ರಭಾಕರ ಕೋರೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಪಡೆದಿರುವ ಜಾತಿ ವರದಿ ದತ್ತಾಂಶವು ಅವೈಜ್ಞಾನಿಕವಾಗಿದೆ. ವೀರಶೈವ ಲಿಂಗಾಯತ ಸಮುದಾಯವು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ತೀವ್ರವಾಗಿ ಖಂಡಿಸಿದ್ದಾರೆ.

ಜಾತಿಯ ಸಂದರ್ಭದಲ್ಲಿ ರಾಜಕೀಯವನ್ನು ಮಾಡಬಾರದು ನೈಜವಾದ ವರದಿಯಾಗಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಈ ವರದಿಯು ಪಾರದರ್ಶಕವೆನಿಸುವುದಿಲ್ಲ. ವರದಿಯು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಸರಿಯಾದ ಅಂಕೆ ಅಂಶಗಳನ್ನು ಸಂಗ್ರಹಿಸಿ ವರದಿ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.

Emergency Service

ಸರಿಯಾಗಿ ಯಾರಿಗೂ ಭೇಟಿಯಾಗದೆ ತರಾತುರಿಯಲ್ಲಿ ಮಾಡಿರುವುದನ್ನು ನಮ್ಮ ಸಮಾಜವು ಒಪ್ಪಲಾರದು. ಸರ್ಕಾರವು ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಇದನ್ನು ರೂಪಿಸಲಿ. ಮತ್ತೊಮ್ಮೆ ಆಮೂಲಾಗ್ರವಾಗಿ ಪರಾರ್ಮಶಿಸಬೇಕು. ಇದನ್ನು ನಮ್ಮ ಸಮಾಜ ಒಕ್ಕೊರಿಲಿನಿಂದ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

Bottom Add3
Bottom Ad 2