Latest

ನದಿ ಸ್ನಾನಕ್ಕಿಳಿದ ನಾಲ್ವರು ಸೋದರರಲ್ಲಿ ಮೂವರ ಸಾವು; ಓರ್ವ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಸಂಬಂಧಿಗಳ ಮನೆಗೆ ಹೋಗಿದ್ದ ನಾಲ್ವರು ಸಹೋದರರು  ನದಿಯಲ್ಲಿ ಸ್ನಾನಕ್ಕಿಳಿದ ವೇಳೆ  ಮೂವರು ಮೃತಪಟ್ಟಿದ್ದು ಒಬ್ಬ ನಾಪತ್ತೆಯಾಗಿರುವ ಘಟನೆ ಒಡಿಶಾ ರಾಜ್ಯದ ರೂರ್ಕೆಲಾದ ಜೀರಿಪಾನಿ ಎಂಬಲ್ಲಿ ನಡೆದಿದೆ. 

ರಿಷಿ ಸಾಹು ಹಾಗೂ ಅವರ ಸಹೋದರರಾದ ಕುಣಾಲ್, ಆಯುಷ್ ಮತ್ತು ಕೌಶಲ್ ತಮ್ಮ ಪಾಲಕರೊಂದಿಗೆ ಜೀರಿಪಾನಿಯ ಸಂಬಂಧಿಗಳ ಮನೆಗೆ ಬಂದಿದ್ದರು. ನಾಲ್ವರೂ ಮಧ್ಯಾಹ್ನ ಕೋಯೆಲ್ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಈ ವೇಳೆ ನಾಲ್ವರೂ ನೀರುಪಾಲಾಗಿದ್ದರು.  ಇವರಲ್ಲಿ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ಮೂವರೂ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಇನ್ನೊಬ್ಬ ಸಹೋದರ ನಾಪತ್ತೆಯಾಗಿದ್ದು ಹುಡುಕಾಟ ನಡೆದಿದೆ. 

Home add -Advt

ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕೋಡಿಯ 8 ಜನರು ಸುರಕ್ಷಿತ

Related Articles

Back to top button