Kannada NewsKarnataka NewsLatest
ಶಿವಾಲಯ ಮಂದಿರದ ಸಮುದಾಯ ಭವನ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿರುವ ಶಿವಾಲಯ ಮಂದಿರದ ನೂತನ ಸಮುದಾಯ ಭವನ ಕಟ್ಟಡದ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ, ನೀಡಲಾಗುತ್ತಿದ್ದು, ಈ ಪೈಕಿ ಮೊದಲ ಕಂತಿನಲ್ಲಿ 2.70 ಲಕ್ಷ ರೂ,ಗಳ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಸಂಜೆ ದೇವಸ್ಥಾನದ ಕಮೀಟಿಯವರಿಗೆ ಹಸ್ತಾಂತರಿಸಿದರು.
ಇದೇ ವೇಳೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಸಹ ನೆರವೇರಿಸಿ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಕುಮಾರಸ್ವಾಮಿ ಲೇ ಔಟ್ ನ ಅಧ್ಯಕ್ಷ, ಉಪಾಧ್ಯಕ್ಷರು, ದೇವಸ್ಥಾನ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


