Karnataka News

  • *ಅಂಚೆ ಚೀಟಿಗಳ ಮಹತ್ವ, ಇತಿಹಾಸ ತಿಳಿಯುವುದು ಅವಶ್ಯ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ*

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಅಂಚೆ ಚೀಟಿಗಳು ಸೇರಿದಂತೆ ವಿಶ್ವದ ಎಲ್ಲ ದೇಶಗಳ ಅಂಚೆ ಚೀಟಿಗಳ ಮಹತ್ವ ಹಾಗೂ ಅದರ ಇತಿಹಾಸ ತಿಳಿದುಕೊಳ್ಳುವುದು ಇಂದಿನ ಯುವಪೀಳಿಗೆಗೆ ಅವಶ್ಯಕವಾಗಿದೆ…

    Read More »
  • *ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ-2025 ವೀರ ಜ್ಯೋತಿಗೆ ಅದ್ಧೂರಿ ಸ್ವಾಗತ*

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ-2025 ಪ್ರಯುಕ್ತ ಬುಧವಾರ (ಜ.8) ಖಾನಾಪುರ ತಾಲೂಕಿನ ನಂದಗಡದಿಂದ ಪ್ರಾರಂಭವಾದ ವೀರ ಜ್ಯೋತಿ ಯಾತ್ರೆಯು ಬೆಳಗಾವಿ ನಗರಕ್ಕೆ ಆಗಮಿಸಿತು.…

    Read More »
  • *ಮೋಸ್ಟ್ ವಾಂಟೆಡ್ 6 ನಕ್ಸಲರು ಶರಣಾಗತಿ*

    ಪ್ರಗತಿವಾಹಿನಿ ಸುದ್ದಿ: ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ 6 ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಂದೆ ಶರಣಾಗತರಾಗಿದ್ದಾರೆ. ಚಿಕ್ಕಮಗಳೂರಿನ ಕಾಡಿನಲ್ಲಿ ಅಡಗಿದ್ದ 6…

    Read More »
  • *ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸ್ ಅಧಿಕಾರಿಗಳಿಗೆ ಸಿಎಂ ಕರೆ *

    ಪ್ರಗತಿವಾಹಿನಿ ಸುದ್ದಿ : ಅಪರಾಧಿಗಳಿಗೆ  ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ…

    Read More »
  • *ಮಹಿಳಾ ಶಿಕ್ಷಕರು, ನೌಕರರಿಗೆ ಶಿಶುಪಾಲನಾ ರಜೆ ಬಗ್ಗೆ ಮಹತ್ವದ ಆದೇಶ*

    ಪ್ರಗತಿವಾಹಿನಿ ಸುದ್ದಿ: ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯ ನೀಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಅನುದಾನಿತ…

    Read More »
  • *ಕೆಲವೇ ಕ್ಷಣಗಳಲ್ಲಿ ಮೋಸ್ಟ್ ವಾಂಟೆಡ್ 6 ನಕ್ಸಲರು ಶರಣಾಗತಿ*

    ಪ್ರಗತಿವಾಹಿನಿ ಸುದ್ದಿ: ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ 6 ನಕ್ಸಲರು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಂದೆ ಶರಣಾಗತರಾಗಲಿದ್ದಾರೆ. ಚಿಕ್ಕಮಗಳೂರಿನ ಕಾಡಿನಲ್ಲಿ…

    Read More »
  • *ಬೆಳಗಾವಿ ಸೇರಿದಂತೆ 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ*

    ಪ್ರಗತಿವಾಹಿನಿ ಸುದ್ದಿ: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ…

    Read More »
  • *ಬೆಳಗಾವಿ ಸೇರಿದಂತೆ 8 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ*

    ಖಾನಾಪುರ ತಹಶಿಲ್ದಾರ್ ಮನೆ ಮೇಲೂ ರೇಡ್ ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. 8 ಅಧಿಕರಿಗಳ ಮನೆ ಮೇಲೆ…

    Read More »
  • *ಅಂಗನವಾಡಿ ಕೇಂದ್ರ ಅಭಿವೃದ್ಧಿ ಯೋಜನೆ ವಿಸ್ತರಣೆಗೆ ಟೊಯೋಟಾ ನಿರ್ಧಾರ*

    ರಾಮನಗರ ಜಿಲ್ಲೆಯ 400 ಹೊಸ ಅಂಗನವಾಡಿ ಕೇಂದ್ರಗಳಿಗೆ ಪ್ರಯೋಜನ ಒದಗಿಸುವ ದ್ದೇಶದಿಂದ ಅಂಗನವಾಡಿ ಅಭಿವೃದ್ಧಿ ಯೋಜನೆ ವಿಸ್ತರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರಗತಿವಾಹಿನಿ ಸುದ್ದಿ, ರಾಮನಗರ : ಸಮಾಜ  ಸುಧಾರಣೆ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿ  ನಿಂತು ಕಾರ್ಯ ನಿರ್ವಹಿಸುತ್ತಿರುವ  ಟೊಯೋಟಾ  ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಕರ್ನಾಟಕ  ಸರ್ಕಾರದ ಸಹಯೋಗದೊಂದಿಗೆ ನಡೆಸುತ್ತಿರುವ  ಟೊಯೋಟಾ ಅಂಗನವಾಡಿ ಅಭಿವೃದ್ಧಿ ಯೋಜನೆಯನ್ನು ವಿಸ್ತರಣೆ ಮಾಡುತ್ತಿರುವುದಾಗಿ ಘೋಷಿಸಿದೆ. ಆರಂಭಿಕ ಹಂತದಲ್ಲಿ 30 ಮಾದರಿ ಅಂಗನವಾಡಿ ಕೇಂದ್ರಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ಸಂಸ್ಥೆಯು ಆರ್ಥಿಕ 2023-24ರಲ್ಲಿ 150 ಕೇಂದ್ರಗಳನ್ನು ಅಭಿವೃದ್ಧಿಪಡಿಸಿತ್ತು. ಈ ಗೆಲುವಿನ ಹುಮ್ಮಸ್ಸಿನಲ್ಲಿ ಡಿಸೆಂಬರ್ 2024 ರಿಂದ ಮಾರ್ಚ್ 2026 ರವರೆಗೆ ರಾಮನಗರ ಜಿಲ್ಲೆಯ ಹೆಚ್ಚುವರಿ 400 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದೆ. ಈ ಯೊಜನೆಯ ಭಾಗವಾಗಿ ಟಿಕೆಎಂ ಸಂಸ್ಥೆಯು ಜನವರಿ 3ರಂದು 400 ಅಂಗನವಾಡಿಯ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರಾಮನಗರದ ಜಿಲ್ಲಾ ಪಂಚಾಯತ್ ಸಿಇಒ ದಿಗ್ವಿಜಯ್ ಬೋಡ್ಕೆ ಐಎಎಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ  ಎಸ್.ಸಿ.ಪದ್ಮರಾಜು ಹಾಜರಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಆಧುನಿಕ ಶಿಕ್ಷಣ ತಂತ್ರಗಳು ಮತ್ತು ಸಾಧನಗಳ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಮನಗರದ ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ ಐಎಎಸ್ ಅವರು, “ಟೊಯೋಟಾ ಅಂಗನವಾಡಿ ಅಭಿವೃದ್ಧಿ ಯೋಜನೆಯಂತಹ ಮಹತ್ವದ ಯೋಜನೆಯ ಮೂಲಕ ನಮ್ಮ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಅಚಲ ಬದ್ಧತೆಗೆ ನಾವು ಮೆಚ್ಚುಗೆ ಸೂಚಿಸುತ್ತಿದ್ದೇವೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಈ ಯೋಜನೆಯು ಅಂಗನವಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಜಿಲ್ಲೆಯಾದ್ಯಂತ ಇರುವ ಅಂಗನವಾಡಿ ಶಿಕ್ಷಕರು ಮತ್ತು ಅಂಗನವಾಡಿ ಕೇಂದ್ರಗಳ ಬಲವರ್ಧನೆ ಮಾಡಲಿದೆ. ಟಿಕೆಎಂ, ಜಿಲ್ಲಾ ಪಂಚಾಯತ್, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜನ ಸಮುದಾಯಗಳ ನಡುವಿನ ಈ ಸಹಭಾಗಿತ್ವವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಿಂದ ಹೇಗೆ ಅರ್ಥಪೂರ್ಣ  ಬದಲಾವಣೆ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಜೊತೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಮತ್ತು ರಾಮನಗರ ಜಿಲ್ಲೆಯ ಮಕ್ಕಳು ಮತ್ತು ಜನಜೀವನದಲ್ಲಿ ಬದಲಾವಣೆ ಉಂಟು ಮಾಡಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥ ಸುದೀಪ್ ಎಸ್ ದಳವಿ ಅವರು ಮಾತನಾಡಿ, “ಟೊಯೋಟಾ ಅಂಗನವಾಡಿ ಅಭಿವೃದ್ಧಿ ಯೋಜನೆಯನ್ನು ವಿಸ್ತರಿಸಲು ಮತ್ತು ಹೆಚ್ಚು ಮಕ್ಕಳು ಹಾಗೂ ಕುಟುಂಬಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಲು ನಾವು ಹೆಮ್ಮೆಪಡುತ್ತೇವೆ. ಅತ್ಯುತ್ತಮ ಅಂಗನವಾಡಿ ಶಿಕ್ಷಣ ಒದಗಿಸಲು ಮತ್ತು ಸಮಗ್ರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸುಸ್ಥಿರ ವಾತಾವರಣಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಬಳಸಿಕೊಳ್ಳಲು ಈ ಯೋಜನೆ ನಮಗೆ ಅನುವು ಮಾಡಿಕೊಡುತ್ತದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಸಂಸ್ಥೆಯು ಶಿಕ್ಷಣವು ಅಭಿವೃದ್ಧಿಯ ಅಡಿಪಾಯವಾಗಿದೆ ಎಂದು ನಂಬುತ್ತದೆ. ಮಕ್ಕಳು ಇಷ್ಟಪಡುವ ಮೂಲಸೌಕರ್ಯ ಒದಗಿಸುವಿಕೆ, ನವೀನ ಬೋಧನಾ ವಿಧಾನಗಳು ಮತ್ತು ಶಿಕ್ಷಕರ ತರಬೇತಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾವು ಮುಂದಿನ ಪೀಳಿಗೆಯು ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮಾಡಲು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಮೂಲಕ ಸಮುದಾಯ ಕಲ್ಯಾಣ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ಮಕ್ಕಳಿಗೆ ಆರೋಗ್ಯಕರ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಒದಗಿಸುತ್ತೇವೆ” ಎಂದು ಹೇಳಿದರು. ಟೊಯೋಟಾ ಅಂಗನವಾಡಿ ಅಭಿವೃದ್ಧಿ ಕಾರ್ಯಕ್ರಮವು ನಾಲ್ಕು ಅಂಶಗಳ ಮೂಲಕ ಬಾಲ್ಯ ಶಿಕ್ಷಣ ಒದಗಿಸುವ ಮತ್ತು ಆರೋಗ್ಯ ಸೇವೆ ಒದಗಿಸುವ ಕಾರ್ಯವನ್ನು ಮಾಡುತ್ತದೆ. ಈ ಯೋಜನೆಯು ಸೌಂದರ್ಯ, ಸುರಕ್ಷತೆ ಮತ್ತು ಕಾರ್ಯನಿರ್ವಹಣೆ ವಿಚಾರಗಳ ಮೇಲೆ ಗಮನ ಹರಿಸಿ ಅಂಗನವಾಡಿ ಕೇಂದ್ರಗಳನ್ನು ಸುರಕ್ಷಿತ, ಆಸಕ್ತಿದಾಯಕ ತಾಣವನ್ನಾಗಿಸುವ ಕಡೆಗೆ ಗಮನ ಹರಿಸುತ್ತದೆ. ನವೀನ ಪರಿಕರಗಳು, ಸ್ಥಳೀಯ ಸಾಮಗ್ರಿಗಳಿಂದ ತಯಾರಿಸಿದ ವಸ್ತುಗಳು ಮತ್ತು ಉತ್ತಮ ಅಭ್ಯಾಸ ಪುಸ್ತಕಗಳ ಮೂಲಕ ಉತ್ತಮ ಕೌಶಲ್ಯಗಳನ್ನು ಕಲಿಸಿ ಚಟುವಟಿಕೆ ಆಧಾರಿತ ಶಿಕ್ಷಣ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಸೂಕ್ತ ತರಬೇತಿ, 40-ಗಂಟೆಗಳ ಇಂಗ್ಲಿಷ್ ಕೋರ್ಸ್ ಮತ್ತು ವೃತ್ತಿಪರ ಬೆಳವಣಿಗೆಯ  ಸಮಗ್ರ ಕೈಪಿಡಿಯ ನೆರವು ನೀಡಲಾಗುತ್ತದೆ. ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳು, ಸಹಾಯಕರಿಗೆ ಅಡುಗೆ ತರಬೇತಿ ಮತ್ತು ತಾಜಾ, ಪೌಷ್ಟಿಕ  ಆಹಾರವನ್ನು  ಒದಗಿಸುವುದರ ಮೂಲಕ ಆರೋಗ್ಯ ಮತ್ತು ನೈರ್ಮಲ್ಯತೆ ಕಡೆಗೆ ಆದ್ಯತೆ ನೀಡಲಾಗುತ್ತದೆ.…

    Read More »
  • ಎಚ್ ಎಂ.ಪಿ.ವಿ ಬಗ್ಗೆ ಭಯ ಬೇಡ: ಸಿಎಂ ಸಿದ್ದರಾಮಯ್ಯ

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಎಚ್ ಎಂ.ಪಿ. ವೈರಾಣು ಬಗ್ಗೆ  ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ…

    Read More »
Back to top button