Kannada NewsKarnataka NewsLatest

*ನಕಲಿ PhD ಪ್ರೊಫೈಲ್ ಸೃಷ್ಟಿಸಿ ಪೋಸ್: ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಲಕ್ಷ ಲಕ್ಷ ಹಣ ಪಡೆದು ಮೋಸ; ಮಗನ ವಂಚನೆಗೆ ತಾಯಿಯೂ ಸಾತ್*

ಪ್ರಗತಿವಾಹಿನಿ ಸುದ್ದಿ: ತಾವು ಶ್ರೀಮಂತ ಕುಟುಂಬದವರು, ಹೈಎಜುಕೇಟೆಡ್ ಎಂದು ಬಿಂಬಿಸಿಕೊಳ್ಳಲು ಯುವಕನೊಬ್ಬ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ನಲ್ಲಿ ಪಿಎಚ್‌ಡಿ ಪದವೀಧರ, ಡಾಕ್ಟರೇಟ್ ಮಾಡಿರುವುದಾಗಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಅವರಿಂದಲೇ ಲಕ್ಷ ಲಕ್ಷ ಹಣ ಪಡೆದು ಕೈಕೊಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಮಗನ ವಂಚನೆಗೆ ತಾಯಿಯೇ ಸಾತ್ ನೀಡಿದ್ದು, ತಾಯಿ-ಮಗನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನಕಲಿ ಪ್ರೊಫೈಲ್ ಮೂಲಕ ಮೈಸೂರು, ಬೆಂಗಳೂರು ಮೂಲದ ಹಲವಾರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಬಣ್ಣದ ಮಾತುಗಳನ್ನಾಡಿ ಲಕ್ಷ ಲಕ್ಷ ಹಣ ಪಡೆದು ತಾಯಿ-ಮಕ ನಾಪತ್ತೆಯಾಗಿದ್ದಾರೆ. ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಕಲಾವತಿ ವಿರುದ್ಧ ಬೆಂಗಳೂರುನ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪ್ರದೀಪ್ ನ ಪ್ರೊಫೈಲ್ ನೋಡಿದ ಯುವತಿಯ ಪೋಷಕರು ಮದುವೆ ಸಂಬಂಧ ಬೆಳೆಸಲು ಬರುತ್ತಿದ್ದರು. ಹೀಗೆ ಬರುವವರಿಗೆ ತಾಯಿ-ಮಗ ಮೈಸೂರಿನಲ್ಲಿ ನಮ್ಮದು ದೊಡ್ಡದೊಂದು ಐಷಾರಾಮಿ ಬಂಗಲೆಯಿದೆ ಎಂದು ಬಂಗಲೆ ರೀತಿಯ ಬಾಡಿಗೆ ಮನೆಯನ್ನು ತೋರಿಸುತ್ತಿದ್ದರು. ತಾವು ಶ್ರೀಮಂತ ಕುಟುಂಬದವರು ಎಂಬಂತೆ ಸಮಾಜದಲ್ಲಿ ಬಿಲ್ಡಪ್ ಕೊಡುತ್ತಿದ್ದರು. ತಾಯಿ-ಮಗನ ಬಣ್ಣದ ಮಾತುಗಳನ್ನು ನಂಬಿ ಯುವತಿಯರ ಕುಟುಂಬದವರು ಮದುವೆ ಮಾತುಕತೆಗೆ ಮುಂದಾದ ಬಳಿಕ ನಮ್ಮದೊಂದು ದೊಡ್ಡ ಮೊತ್ತದ ಹಣ ತಾಂತ್ರಿಕ ಕಾರಣಗಳಿಂದ ಬ್ಯಾಂಕ್‌ನಲ್ಲಿ ಸ್ಟ್ರಕ್ ಆಗಿದೆ, ಇನ್ನು ಕೆಲವೇ ದಿನಗಳಲ್ಲಿ ಹಣ ವಾಪಸ್ ಬರುತ್ತದೆ, ಸದ್ಯಕ್ಕೆ ಅರ್ಜೆಂಟ್ ಇದೆ ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು.

ಇದೇ ರೀತಿ ಇತ್ತೀಚೆಗೆ ಬೆಂಗಳೂರಿನ ಶ್ರೀಮಂತ ಕುಟುಂಬವೊಂದು ಪ್ರದೀಪನ ಮಾತು ನಂಬಿ ಲಕ್ಷಾಂತರ ರೂಪಾಯಿ ಹಣ ನೀಡಿ ಮೋಸ ಹೋಗಿದೆ. ಹಣ ಕೈ ಸೇರಿದ ಬಳಿಕ ತಾಯಿ-ಮಗ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಇದರಿಂದ ಅನುಮಾನಗೊಂದು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪರಿಶೀಲನೆ ವೇಳೆ ಪ್ರದೀಪ್ ಹಾಗೂ ಆತನ ತಾಯಿಯ ಬಂಡವಾಳ ಬಯಲಾಗಿದೆ. ತಾಯಿ-ಮಗ ಇಬ್ಬರೂ ನಕಲಿ ಪ್ರೊಫೈಲ್ ಮೂಲಕ ಯುವತಿಯರು ಹಾಗೂ ಅವರ ಕುಟುಂಬಕ್ಕೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವುದು ಗೊತ್ತಾಗಿದೆ. ಇದೇ ರೀತಿ ಹಲವು ಯುವತಿಯರಿಗೆ, ಕುಟುಂಬದವರಿಗೆ ಮೋಸ ಮಾಡಿದ್ದಾರೆ. ಮೋಸ ಹೋದ ಕುಟುಂಬದವರು ಮೈಸೂರಿನ ಬಂಗಲೆ ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆಡುಗೋಡಿ ಪೊಲೀಸರು ತಾಯಿ-ಮಗನ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರೆಸಿದೆ.

Related Articles

Back to top button